ಉಪ್ಪಿನಂಗಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿವೃತ್ತಿ ಹಿನ್ನೆಲೆ ➤ ಪ್ರಭಾರ ಪಿಡಿಓ ಆಗಿ ಕುಟ್ರುಪ್ಪಾಡಿಯ ವಿಲ್ಫ್ರೆಡ್ ರೊಡ್ರಿಗಸ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮೇ.22. ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ನಿವೃತ್ತಿ ಹಿನ್ನೆಲೆಯಲ್ಲಿ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲೊರೆನ್ಸ್ ರೋಡ್ರಿಗಸ್ ಉಪ್ಪಿನಂಗಡಿ ಪಂಚಾಯತ್ ನ ಪ್ರಭಾರ ಪಿಡಿಓ ಆಗಿ ಅಧಿಕಾರ ಸ್ವೀಕರಿಸಿದರು.

ಉಪ್ಪಿನಂಗಡಿ ಗ್ರಾಮ ಪಂಚಾಯತ್ ನಲ್ಲಿ ಪಿಡಿಓ ಆಗಿದ್ದ ಮಾಧವ ಕೆ.ಯವರು ಜುಲೈ 31 ರಂದು ಕರ್ತವ್ಯದಿಂದ ನಿವೃತ್ತಿ ಹೊಂದಲಿದ್ದು, ಮೇ.26 ರಿಂದ ನಿವೃತ್ತಿ ಪೂರ್ವ ರಜೆಯಲ್ಲಿ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ‌ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲೊರೆನ್ಸ್ ರೋಡ್ರಿಗಸ್ ರವರನ್ನು ಉಪ್ಪಿನಂಗಡಿ ಪಂಚಾಯತ್ ನ ಪಿಡಿಓ ಪ್ರಭಾರವನ್ನು ಪಡೆದುಕೊಂಡು ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಕರ್ತವ್ಯ ನಿರ್ವಹಿಸುವಂತೆ ಪುತ್ತೂರು ತಾಲೂಕು ಪಂಚಾಯತ್ ಕಾರ್ಯಾಲಯವು ಆದೇಶಿಸಿದೆ.

Also Read  ಉಪ್ಪಿನಂಗಡಿ: ರಸ್ತೆ ಅಪಘಾತ  ➤ ಪ್ರಯಾಣಿಕರಿಗೆ ಗಾಯ

error: Content is protected !!
Scroll to Top