ಮಂಗಳೂರು: ವಿಮಾನ ದುರಂತಕ್ಕೆ ಸಂದಿತು 10 ವರುಷ ➤ ಜಗತ್ತನ್ನೇ ಬೆಚ್ಚಿ ಬೀಳಿಸಿದ ಕರಾವಳಿಯ ಭೀಕರ ದುರಂತ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.22. ಅಂತರ್ರಾಷ್ಟ್ರೀಯ ವಿಮಾನವೊಂದು ಪೈಲಟ್‌ ನ ಅಚಾತುರ್ಯದಿಂದಾಗಿ ನೆಲಕ್ಕಪ್ಪಳಿಸಿ 159 ಮಂದಿ ಸಜೀವ ದಹನವಾಗುವುದರೊಂದಿಗೆ ಜಗತ್ತನ್ನೇ ಬೆಚ್ಚಿಬೀಳಿಸಿದ ಆ ಘೋರ ದುರಂತಕ್ಕೆ ಇಂದಿಗೆ 10 ವರ್ಷ ತುಂಬಿದೆ.

2010 ಮೇ 22ನೇ ತಾರೀಕು ಮುಂಜಾನೆ 6:14 ರ ಸಮಯ. ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಪೈಲಟ್ ನ ಅಚಾತುರ್ಯದಿಂದಾಗಿ ಕ್ಷಣಾರ್ಧದಲ್ಲಿ ರನ್ ವೇಗೆ ಅಪ್ಪಳಿಸಿ 8 ಮಂದಿ ಸಿಬ್ಬಂದಿಗಳ ಸಹಿತ 159 ಜೀವಗಳನ್ನು ಬಲಿತೆಗೆದುಕೊಂಡಿತ್ತು. ಕರಾವಳಿಯ ಇತಿಹಾಸದಲ್ಲಿ ನಡೆದ ಆ ಘೋರ ದುರಂತದ ನೆನಪು ಇನ್ನೂ ಮಾಸಿಲ್ಲ. ದುಬೈನಿಂದ ಹಲವಾರು ಕನಸುಗಳನ್ನು ಹೊತ್ತುಕೊಂಡು ತವರಿಗೆ ಮರಳುತ್ತಿದ್ದವರ ಕನಸುಗಳು ಜೀವದ ಜೊತೆ ಎಲ್ಲರೂ ನೋಡ ನೋಡುತ್ತಿದ್ದಂತೆ ಸುಟ್ಟು ಕರಕಲಾಗಿದ್ದವು.

Also Read  ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ

ಈ ಭೀಕರ ದುರಂತಕ್ಕೆ ಇಂದಿಗೆ 10 ವರ್ಷ ಪೂರ್ತಿಯಾಗಿದ್ದು, ಬಹುತೇಕ ಸಂತ್ರಸ್ತ ಕುಟುಂಬದವರು ನ್ಯಾಯಾಲಯದಲ್ಲಿ ಹೋರಾಡಿ ಪರಿಹಾರ ಪಡೆದುಕೊಂಡಿದ್ದಾರೆ. ಇನ್ನೂ ಹಲವು ಸಂತ್ರಸ್ತರಿಗೆ ಪರಿಹಾರ ಬಾಕಿಯಾಗಿದ್ದು, ಯೋಗ್ಯವಾದ ಪರಿಹಾರಕ್ಕಾಗಿ ಹೋರಾಡುತ್ತಿದ್ದಾರೆ.

error: Content is protected !!
Scroll to Top