ಕರಾವಳಿಯಲ್ಲಿ ಕೊರೋನಾ ರಣಕೇಕೆ ➤ ಒಂದೇ ದಿನ ಕರಾವಳಿಯಲ್ಲಿ 33 ಮಂದಿಗೆ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಮಂಗಳೂರು/ಉಡುಪಿ, ಮೇ.21. ಕರಾವಳಿಯಲ್ಲಿ ಕೊರೊನಾ ಅಟ್ಟಹಾಸಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 31 ಪ್ರಕರಣ ದೃಢವಾಗಿದ್ದು, ಕರಾವಳಿಗರನ್ನು ಆತಂಕಕ್ಕೀಡಾಗುವಂತೆ ಮಾಡಿದೆ.

ರಾಜ್ಯ ಅರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ನಲ್ಲಿ ಈ ಶಾಕಿಂಗ್ ನ್ಯೂಸ್ ಹೊರಬಿದ್ದಿದ್ದು, ಉಡುಪಿ ಜಿಲ್ಲೆಯಲ್ಲಿ 27 ಪ್ರಕರಣ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಉಡುಪಿಯ 27 ಜನರಲ್ಲಿ ಪಾಸಿಟಿವ್ ಬಂದಿದ್ದು, ಈ ಪೈಕಿ ಮಹಾರಾಷ್ಟ್ರದಿಂದ ಬಂದ 23 ಜನರಲ್ಲಿ, ತೆಲಂಗಾಣದಿಂದ ಬಂದ ಮೂವರಲ್ಲಿ ಹಾಗೂ ಕೇರಳದಿಂದ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದ ಒಬ್ಬರಲ್ಲಿ ಕೊರೋನಾ ಪಾಸಿಟಿವ್ ಬಂದಿದೆ. ಆತಂಕಕಾರಿ ವಿಚಾರ ಎಂದರೆ 16 ಮಕ್ಕಳಲ್ಲಿ ಕೊರೊನಾ ದೃಢವಾಗಿದೆ.

Also Read  ಬಂಬಿಲ ಮಹಾದೇವಿ ಮಹಿಳಾ ಭಜನ ಮಂಡಳಿಯಿಂದ ಕೊಡುಗೆ

error: Content is protected !!
Scroll to Top