ಕಡಬ: ವಲಸೆ ಕಾರ್ಮಿಕರು ಊರಿಗೆ ತೆರಳಲು ಸೂಚನೆ, ಮತ್ತೆ ಪ್ರಯಾಣ ರದ್ದು ➤ ಆಕ್ರೋಶಕೊಂಡ ವಲಸೆ ಕಾರ್ಮಿಕರಿಂದ ಊರಿಗೆ ಕಳುಹಿಸುವಂತೆ ಪಟ್ಟು

(ನ್ಯೂಸ್ ಕಡಬ) newskadaba.com ಕಡಬ, ಮೇ.19. ಕಡಬ ಭಾಗದಿಂದ ಇಂದು ಊರಿಗೆ ತೆರಳಲು ಅಧಿಕಾರಿಗಳ ಸೂಚನೆ ಮೇರೆಗೆ ತಯಾರಾಗಿದ್ದ ಕಾರ್ಮಿಕರಿಗೆ ನಿರಾಸೆಯಾಗಿದೆ. ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದುಗೊಂಡಿದ್ದು ಜಾರ್ಖಂಡ್ ಮೂಲದ ಸುಮಾರು 148 ಕಾರ್ಮಿಕರು ಮಂಗಳವಾರದಂದು ಕಡಬ ತಹಸೀಲ್ದಾರ್ ಕಛೇರಿ ಎದುರು ಜಮಾಯಿಸಿದ್ದು ತಮ್ಮನ್ನು ಊರಿಗೆ ಕಳುಹಿಸಿಕೊಡುವಂತೆ ಆಗ್ರಹಿಸಿದ್ದಾರೆ.

 

ಕಡಬ ಆಸುಪಾಸಿನಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದ ಸುಮಾರು 148 ಕಾರ್ಮಿಕರಿಗೆ ಮೇ.19ರಂದು ಊರಿಗೆ ಹೊರಡಲು ಸಿದ್ದವಾಗುವಂತೆ ಪೋಲಿಸ್ ಇಲಾಖೆಯಿಂದ ಸಂದೇಶ ಬಂದಿತ್ತು, ಈ ಬಗ್ಗೆ ಕಾರ್ಮಿಕರು ತಯರಾಗಿದ್ದರು. ಆದರೇ ಕೊನೆಯ ಕ್ಷಣದಲ್ಲಿ ರೈಲು ಸಮಸ್ಯೆಯಿಂದ ಪ್ರಯಾಣ ರದ್ದುಗೊಂಡಿದೆ ಎನ್ನಲಾಗಿದೆ. ಆದರೆ ಊರಿಗೆ ಹೋಗುವ ತವಕದಲ್ಲಿದ್ದ ಕಾರ್ಮಿಕರಿಗೆ ನಿರಾಸೆಯಾಗಿದ್ದು, ತಮ್ಮನ್ನು ಊರಿಗೆ ಕಳುಹಿಸಿಕೊಡುವಂತೆ ಆಗ್ರಹಿಸುತ್ತಿದ್ದು ನಾವು ತಹಸೀಲ್ದಾರ್ ಕಛೇರಿ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ.

Also Read  ಸ್ಕೂಟಿಗೆ ಟ್ರಕ್ ಢಿಕ್ಕಿ, ಮಹಿಳೆಯನ್ನು 3 ಕಿ.ಮೀ ಎಳೆದೊಯ್ದ ಟ್ರಕ್..!!

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ತಮ್ಮ ಅಳಲು ತೋಡಿಕೊಂಡ ಕಾರ್ಮಿಕರು ಎರಡು ತಿಂಗಳಿಂದ ಕೆಲಸವಿಲ್ಲದೆ ನಾವು ಕಂಗಲಾಗಿದ್ದೇವೆ, ನಮಗೆ ಮನೆಯ ಬಾಡಿಗೆ ಕಟ್ಟಲು ಹಣವಿಲ್ಲ, ಈಗ ಊಟಕ್ಕೂ ಕಷ್ಟವಾಗಿದೆ, ನಾವು ಊರಿಗೆ ಹೋಗಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಎಲ್ಲ ಲಿಸ್ಟ್ ತಯಾರಾಗಿದ್ದು, ಮೇ.19ರಂದು ಊರಿಗೆ ಹೋಗಲು ತಯರಾಗಿರಿ ಎಂಬ ಸಂದೇಶ ಕೂಡ ಬಂದಿತ್ತು, ಆದರೇ ಮೇ.18ರ ರಾತ್ರಿಯೇ ಪ್ರಯಾಣ ರದ್ದುಗೊಂಡಿರುವ ಬಗ್ಗೆ ಮಾಹಿತಿ ಬಂದಿದೆ, ಏನೇ ಆದರೂ ನಮ್ಮನ್ನು ಇವತ್ತೇ ಕಳುಹಿಸಿಕೊಡಬೇಕು. ನಮಗೆ ಪೋಲಿಸ್ ಠಾಣೆ, ತಹಸೀಲ್ದಾರ್ ಕಛೇರಿ ಅಲೆದು ಸಾಕಾಗಿದೆ, ದಯವಿಟ್ಟು ನಮ್ಮನ್ನು ಕಳುಹಿಸಿಕೊಡಿ ಎಂದು ವಿನಂತಿಸಿಕೊಂಡಿದ್ದಾರೆ.

error: Content is protected !!
Scroll to Top