ರಾಜ್ಯದಲ್ಲಿ ಇಂದು ದಾಖಲೆಯ 99 ಕೋವಿಡ್ ಪ್ರಕರಣ ದೃಢ

ಬೆಂಗಳೂರು, ಮೇ 18: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 99 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1246ಕ್ಕೇರಿಕೆಯಾಗಿದೆ. ಇದು ರಾಜ್ಯದಲ್ಲಿ ಹೊಸ ದಾಖಲೆಯಾಗಿದೆ.

ಇಂದು ಮಧ್ಯಾಹ್ನದ ಬುಲೆಟಿನ್‌ನಲ್ಲಿ 84 ಜನರ ವರದಿಯಾಗಿದ್ದು, ಕಲಬುರಗಿಯಲ್ಲಿ 5, ದಕ್ಷಿಣ ಕನ್ನಡದಲ್ಲಿ 2 ಮತ್ತು ಉಡುಪಿ- ಉತ್ತರ ಕನ್ನಡದಲ್ಲಿ ತಲಾ 1 ಪ್ರಕರಣ ವರದಿಯಾಗಿದೆ.

ಬೆಂಗಳೂರಿನಲ್ಲಿ 5 ಪ್ರಕರಣಗಳು ಶಿವಾಜಿನಗರದಲ್ಲಿ ವರದಿಯಾಗಿದೆ. ಮತ್ತೊಂದು ಪ್ರಕರಣ ತಮಿಳುನಾಡಿನಿಂದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

ಕಲಬುರಗಿಯಲ್ಲಿ ನಾಲ್ಕು ಮಕ್ಕಳಿಗೆ ಸೇರಿದಂತೆ ಐವರಿಗೆ ಸೋಂಕು ತಗುಲಿದ್ದು, ಇಬ್ಬರು ಮುಂಬೈನಿಂದ ಬಂದವರು ಮತ್ತು ಮೂವರು ಪೂಣೆಯಿಂದ ಬಂದವರಾಗಿದ್ದಾರೆ.
ದಕ್ಷಿಣ ಕನ್ನಡದಲ್ಲಿ ರಾಯಗಡದದಿಂದ ಬಂದ ವ್ಯಕ್ತಿಗೆ ಸೋಂಕು ತಾಗಿದ್ದು, ಮತ್ತೊಂದು ಮಹಿಳೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.

Also Read  ಕಾರ್ಕಳ : ಕೊರೊನಾ ಸೋಂಕಿತ ವ್ಯಕ್ತಿ ಆತ್ಮಹತ್ಯೆಗೆ ಶರಣು

ಉಡುಪಿಯಲ್ಲಿ ಮುಂಬೈನಿಂದ ಬಂದ ಮಹಿಳೆಗೆ ಸೋಕು ತಾಗಿದ್ದು, ಉತ್ತರ ಕನ್ನಡದಲ್ಲೂ 30ರ ಯುವಕನಿಗೆ ಸೋಂಕು ದೃಢವಾಗಿದೆ.

error: Content is protected !!
Scroll to Top