ಇಂದಿನಿಂದ ಕಡಬ, ಬೆಳ್ಳಾರೆಯಲ್ಲಿ ಸಂಜೆಯವರೆಗೆ ಅಂಗಡಿಗಳು ಓಪನ್

(ನ್ಯೂಸ್ ಕಡಬ) newskadaba.com ಕಡಬ, ಮೇ.17. ಕಡಬ ಹಾಗೂ ಬೆಳ್ಳಾರೆ ಪೇಟೆಯಲ್ಲಿ ಕಳೆದ ಕೆಲವು ದಿನಗಳಿಂದ ಮಧ್ಯಾಹ್ನದವರೆಗೆ ಇರುತ್ತಿದ್ದ ವಿವಿಧ ವ್ಯಾಪಾರಗಳು, ನಾಳೆಯಿಂದ (ಮೇ.18) ಬೆಳಗ್ಗೆ 7 ರಿಂದ ಸಂಜೆ 7 ರ ತನಕ ಅಂಗಡಿ ಮುಂಗಟ್ಟುಗಳು ತೆರೆಯಲಿವೆ.

ಕಡಬದಲ್ಲಿ ವರ್ತಕರು ಸ್ವಯಂ ನಿರ್ಧಾರದಿಂದ ಅಂಗಡಿಗಳನ್ನು ಮಧ್ಯಾಹ್ನದ ನಂತರ ಅಂಗಡಿಗಳನ್ನು ಬಂದ್ ಮಾಡಿದ್ದರು‌. ಇದೀಗ ಸಂಜೆಯವರೆಗೂ ತೆರೆದು ವ್ಯಾಪಾರ ನಡೆಸುವುದಾಗಿ ವರ್ತಕ ಬಳಗದ ವತಿಯಿಂದ ತೀರ್ಮಾನಿಸಲಾಗಿದೆ. ಅದೇ ರೀತಿ ಬೆಳ್ಳಾರೆ ಪೇಟೆಯಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಕಟ್ಟುನಿಟ್ಟಿನ ಕ್ರಮಗಳಿದ್ದು ಅಂಗಡಿಗಳನ್ನು ಬೆಳಿಗ್ಗೆ ಗಂಟೆ 6.00 ರಿಂದ ಮಧ್ಯಾಹ್ನ ,2.00 ಗಂಟೆಯವರೆಗೆ ಮಾತ್ರ ತೆರೆಯಲು ಅವಕಾಶ ನೀಡಲಾಗಿತ್ತು. ನಾಳೆಯಿಂದ ಜಿಲ್ಲಾಧಿಕಾರಿಯವರ ಆದೇಶದಂತೆ ಬೆಳಿಗ್ಗೆಯಿಂದ ಸಂಜೆ ಗಂಟೆ 7.00 ರವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಎಲ್ಲಾ ವ್ಯಾಪಾರಗಳನ್ನು ಎಂದಿನಂತೆ ಕಾರ್ಯಚರಿಸಲು ಅವಕಾಶ ಮಾಡಿಕೊಡಲಾಗಿದ್ದು, ಹೋಟೆಲ್ ಗಳಿಗೆ ಕೇವಲ ಪಾರ್ಸೆಲ್ ಕೊಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.

Also Read  ಮಿತ್ತೂರು: ಲಾರಿ ಢಿಕ್ಕಿ ಹೊಡೆದು ರೈಲ್ವೇ ಮೇಲ್ಸೇತುವೆ ಕುಸಿತ ► ತಪ್ಪಿದ ಭಾರೀ ಅನಾಹುತ

error: Content is protected !!
Scroll to Top