ಹೆಚ್ಚಿದ ಕೊರೋನಾ ಅಟ್ಟಹಾಸ ➤ ದ.ಕ ಜಿಲ್ಲೆ 2, ಉಡುಪಿಯ ಒಬ್ಬರಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಮಂಗಳೂರು. ಮೇ. 17, ದಕ್ಷಿಣ ಕನ್ನಡದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಲೇ ಇದ್ದು ಮೇ.17ರಂದು 2 ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಮೇ.16 ರಂದು ಯಾವುದೇ ಪಾಸಿಟಿವ್ ಪ್ರಕರಣಗಳು ಇರದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆರಡು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಆತಂಕಕಾರಿಯಾಗಿದೆ.

ಕೋವಿಡ್ ಟೆಸ್ಟ್ ಗೆ ಒಳಗಾಗಿದ್ದ ಶಂಕಿತ ಯುವಕ ಕೋವಿಡ್ ಆಸ್ಪತ್ರೆಗೆ ಬಂದು ಸ್ವಯಂ ಪರೀಕ್ಷೆಗೆ ಒಳಗಾಗಿದ್ದ ಮಂಗಳೂರಿನ ಜಪ್ಪಿನಮೊಗರು ನಿವಾಸಿ 31 ವರ್ಷದ ಪುರುಷ ಹಾಗೂ ಮಂಗಳೂರಿನ ಯೆಯ್ಯಾಡಿ ಮೂಲದ 35 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಒಬ್ಬರಿಗೆ ಸೋಂಕು ತಗುಲಿದೆ.

Also Read  ಕೆಂಜಾಳ: ಅರಣ್ಯ ಇಲಾಖೆಯ ವಸತಿ ಗೃಹಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಕಾರು ➤ ಸಿನಿಮೀಯ ಶೈಲಿಯಲ್ಲಿ ಕಾರಿನಲ್ಲಿದ್ದವರು ಅಪಾಯದಿಂದ ಪಾರು

ಮೇ.17ರಂದು ರಾಜ್ಯದಲ್ಲಿ 54 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ1146ಕ್ಕೆ ಏರಿಕೆಯಾಗಿದೆ.

 

error: Content is protected !!
Scroll to Top