ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕೊರೋನ ಟೆಸ್ಟ್ ಲ್ಯಾಬ್‌ಗೆ ಅನುಮತಿ

ಉಡುಪಿ, ಮೇ 16: ಕೊರೋನ ಸೋಂಕು ಶಂಕಿತ ವ್ಯಕ್ತಿಗಳ ಗಂಟಲು ದ್ರವದ ಮಾದರಿಗಳ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಪ್ರಯೋಗಾಲಯದ ಆರಂಭಕ್ಕೆ ಕೇಂದ್ರ ಸರಕಾರ ಕೊನೆಗೂ ಗ್ರೀನ್‌ಸಿಗ್ನಲ್ ನೀಡಿದೆ.

ಈಗಾಗಲೇ ಕೆಎಂಸಿಯಲ್ಲಿ ಸುಸಜ್ಜಿತವಾದ, ಅತ್ಯಂತ ಆಧುನಿಕವಾದ ವೈರಾಲಜಿ ಪರೀಕ್ಷಾ ಪ್ರಯೋಗಾಲಯವಿದ್ದು, ಇದರಲ್ಲಿ ಕೊರೋನ ವೈರಸ್‌ನ ಪರೀಕ್ಷೆ ಮಾಡಲು ಇದೀಗ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ಅನುಮತಿ ನೀಡಿದೆ. ಐಸಿಎಂಆರ್‌ನಿಂದ ಕಳೆದ ಗುರುವಾರ ಅಧಿಕೃತವಾದ ಪರವಾನಿಗೆ ಪತ್ರ ಬಂದಿದೆ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಹೇಳಿದ್ದಾರೆ. ಈ ಪ್ರಯೋಗಾಲಯವು ಮುಂದಿನ ಸೋಮವಾರ-ಮಂಗಳವಾರ ಕಾರ್ಯಾರಂಭವಾಗಲಿದೆ. ಅರ್ಧದಿನದೊಳಗೆ ಇಲ್ಲಿ ಫಲಿತಾಂಶ ಪಡೆಯಲು ಸಾಧ್ಯವಿದೆ ಎಂದರು.

error: Content is protected !!

Join the Group

Join WhatsApp Group