ಅಕ್ರಮ ಕಸಾಯಿಖಾನೆಗೆ ಬೆಳ್ಳಾರೆ ಪೊಲೀಸರಿಂದ ದಾಳಿ ➤ 40 ಕೆಜಿ ದನದ ಮಾಂಸ ವಶಕ್ಕೆ- ಮೂವರ ಬಂಧನ, ಇಬ್ಬರು ಪರಾರಿ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.15. ಠಾಣಾ ವ್ಯಾಪ್ತಿಯ ಮಾಸ್ತಿಕಟ್ಟೆ ಸಮೀಪ ಉಮಿಕ್ಕಳದಲ್ಲಿ ಅಕ್ರಮವಾಗಿ ದನದ ಮಾಂಸ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಬೆಳ್ಳಾರೆ ಪೊಲೀಸರು ದನದ ಮಾಂಸ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ಮರದ ಅಡಿಯಲ್ಲಿ ದನದ ಮಾಂಸ ಮಾಡುವ ಖಚಿತ ಮಾಹಿತಿ ದೊರೆತ ಬೆಳ್ಳಾರೆ ಪೊಲೀಸರು ದಾಳಿ ಮಾಡಿ ಸುಮಾರು 40 ಕೆ.ಜಿ.ದನದ ಮಾಂಸ ಹಾಗೂ ಮಾಂಸ ಮಾಡಲು ಉಪಯೋಗಿಸಿದ ಕತ್ತಿ, ಚೂರಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಹಾರಿಸ್, ಮಹಮ್ಮದ್ ಸಿನಾನ್, ಉಮ್ಮರ್ ಫಾರೂಕ್ ಎಂಬವರನ್ನು ಬಂಧಿಸಿದ್ದು, ಹೈದರಾಲಿ ಮತ್ತು ಸಲಾಂ ಎಂಬವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

Also Read  ವಿಟ್ಲದಲ್ಲಿ ಮತ್ತೆ ಮೂವರಿಗೆ ಕೊರೋನಾ ಪಾಸಿಟಿವ್ ➤ ಕೊರೋನಾಗೆ ನಲುಗಿದ ಒಂದೇ ಕುಟುಂಬದ ಏಳು ಮಂದಿ

error: Content is protected !!
Scroll to Top