Breaking news ದುಬೈಯಿಂದ ಉಡುಪಿಗೆ ಬಂದ 6 ಮಂದಿಗೆ ಕೊರೋನ ಸೋಂಕು ದೃಢ: ಡಿಎಚ್ಒ

ಉಡುಪಿ, ಮೇ 15: ದುಬೈಯಿಂದ ಮೇ 12 ರಂದು ಉಡುಪಿಗೆ ಆಗಮಿಸಿದ 49 ಮಂದಿಯ ಪೈಕಿ ಆರು ಮಂದಿಗೆ ಕೊರೋನ ಸೋಂಕು ದೃಢಪಟ್ಟಿರುವುದಾಗಿ ಉಡುಪಿ ಡಿಎಚ್ಒ ಡಾ.ಸುದೀರ್ ಚಂದ್ರ ಚೂಡ ತಿಳಿಸಿದ್ದಾರೆ.

ಕೊರೋನ-ಲಾಕ್‌ಡೌನ್‌ನಲ್ಲಿ ಅತಂತ್ರರಾದ ಹಿನ್ನೆಲೆಯಲ್ಲಿ ದುಬೈಯಿಂದ 176 ಮಂದಿ ಅನಿವಾಸಿ ಕನ್ನಡಿಗರನ್ನು  ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಕರೆತರಲಾಗಿತ್ತು. ಈ ಪೈಕಿ ಉಡುಪಿಯ 49 ಮಂದಿ ಇದ್ದರು. ಇವರನ್ನು ಉಡುಪಿಯ ಹೊಟೇಲ್ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಆರು ಮಂದಿಯ ವರದಿ ಪಾಸಿಟಿವ್ ಬಂದಿರುವುದರಿಂದ ಉಡುಪಿಯ ಟಿಎಂಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಎಚ್ಒ ತಿಳಿಸಿದ್ದಾರೆ.

Also Read  ಪಂಜ: ಪತ್ನಿಯ ಮೇಲೆಯೇ ತನ್ನ ಸ್ನೇಹಿತನನ್ನು ಅತ್ಯಾಚಾರವೆಸಗಲು ಕುಮ್ಮಕ್ಕು ► ಆರೋಪಿಗಳಿಬ್ಬರ ಬಂಧನ

error: Content is protected !!
Scroll to Top