ಗುಜರಾತ್ ನಿಂದ ಕ್ವಾರಂಟೈನ್ ಇಲ್ಲದೆ ಕಡಬಕ್ಕೆ ಆಗಮಿಸಿದ ಕುಟುಂಬ ➤ ಸಾರ್ವಜನಿಕರಲ್ಲಿ ಆತಂಕ

(ನ್ಯೂಸ್ ಕಡಬ) newskadaba.com ಕಡಬ, ಮೇ.14. ತಾಲೂಕಿನ ಕುಟ್ರುಪಾಡಿ ಗ್ರಾಮದ ಕುಂಟೋಡಿ ಎಂಬಲ್ಲಿಗೆ ಗುಜರಾತ್ ನಿಂದ ಐವರು ಬಂದಿದ್ದು, ಅವರು ಕುಂಟೋಡಿಯ ಮನೆಯೊಂದರಲ್ಲಿ ಉಳಿದುಕೊಂಡಿದ್ದಾರೆ.

ಈಗಾಗಲೇ ಜಿಲ್ಲಾಡಳಿತ ಹೊರರಾಜ್ಯದಿಂದ ಬಂದವರಿಗೆ ಪ್ರತ್ಯೇಕ ಕ್ವಾರಂಟೈನ್ ನಲ್ಲಿರುವಂತೆ ಆದೇಶ ನೀಡಿದೆಯಾದರೂ, ಈ ಆದೇಶದ ನಡುವೆಯೂ ಇವರು ಇಲ್ಲಿಗೆ ಹೇಗೆ ಬಂದರು ಎಂಬ ಪ್ರಶ್ನೆ ಉದ್ಬವಿಸಿದೆ. ಅವರ ಮನೆಗೆ ಕಡಬ ಸರಕಾರಿ ಆಸ್ಪತ್ರೆಯ ಆರೋಗ್ಯ ಸಹಾಯಕಿ ರಾಜೇಶ್ವರಿ ಹಾಗೂ ಪೊಲೀಸರು ತೆರಳಿ ಹೊರಗಡೆ ಕ್ವಾರಂಟೈನ್ ನಲ್ಲಿರುವಂತೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆ ಮತ್ತು ಪಂಚಾಯತ್ ಅವರಿಗೆ ಸೂಕ್ತ ವ್ಯವಸ್ಥೆ ಮಾಡಿ ಜಿಲ್ಲಾಡಳಿತದ ಆದೇಶ ಪಾಲನೆ ಮಾಡಿ ಸ್ಥಳೀಯರ ಆತಂಕವನ್ನು ದೂರ ಮಾಡುವಂತೆ ಸಾರ್ವಜನಿಕರ ಆಗ್ರಹ ವ್ಯಕ್ತವಾಗಿದೆ.

Also Read  ಬ್ಯಾಂಕ್ ಲಾಕರ್ ನಲ್ಲಿಟ್ಟ ಲಕ್ಷ ಲಕ್ಷ ಹಣವನ್ನು ತಿಂದು ಹಾಕಿದ ಗೆದ್ದಲು !                 

error: Content is protected !!
Scroll to Top