ರಾಜ್ಯದಲ್ಲಿ ಇಂದು 34 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 959ಕ್ಕೆ ಏರಿಕೆ



  • ಇಬ್ಬರು ಮೃತ್ಯು

ಬೆಂಗಳೂರು, ಮೇ 13: ರಾಜ್ಯದಲ್ಲಿ ಇಂದು ಹೊಸದಾಗಿ 34 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 959ಕ್ಕೆ ಏರಿಕಯಾಗಿದ್ದು, ಒಂದೇ ದಿನ ಇಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.





ಬೀದರ್ 12, ಕಲಬುರಗಿ 8, ಹಾಸನ 4ದಾವಣೆಗೆರೆ 2, ವಿಜಯಪುರ 2, ಉತ್ತರ ಕನ್ನಡ 2, ಬೆಂಗಳೂರು 2, ಹಾಗೂ ದಕ್ಷಿಣ ಕನ್ನಡ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಕಲಬುರಗಿಯ 60 ವರ್ಷದ ಪುರಷ ಹಾಗೂ ದ.ಕ. ಜಿಲ್ಲೆಯ 58 ವರ್ಷದ ಮಹಿಳೆ ಸೋಂಕಿನಿಂದ ಸಾವನ್ನಪ್ಪಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 33ಕ್ಕೇರಿಕೆಯಾಗಿದೆ. 959 ಮಂದಿ ಸೋಂಕಿತರ ಪೈಕಿ 450 ಮಂದಿ ಗುಣಮುಖರಾಗಿದ್ದು, 474 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.






error: Content is protected !!
Scroll to Top