ಕಡಬದ ಮದ್ಯದಂಗಡಿಯಲ್ಲಿ ಹೆಚ್ಚುವರಿ ದರ ವಸೂಲಿ ➤ ಅಬಕಾರಿ ಇಲಾಖೆಯ ಅಧಿಕಾರಿಗಳಿಂದ ದಾಳಿ ➤ ಮಾರುವೇಶದಲ್ಲಿ ಕಾರ್ಯಾಚರಣೆ ನಡೆಸಿದ ಕಡಬದ ಪತ್ರಕರ್ತ

(ನ್ಯೂಸ್ ಕಡಬ) newskadaba.com ಕಡಬ, ಮೇ.13. ಸರಕಾರಿ ಸ್ವಾಮ್ಯದ ಮದ್ಯದಂಗಡಿಯಲ್ಲಿ ಹೆಚ್ಚುವರಿ ದರ ವಸೂಲು ಮಾಡಲಾಗುತ್ತಿದೆ ಎಂಬ ಆರೋಪದಲ್ಲಿ ದಾಳಿ ನಡೆಸಿದ ಅಬಕಾರಿ‌ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ಕಡಬದ ಪಂಜ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಎಂಎಸ್ಐಲ್ ಮದ್ಯ ಮಾರಾಟ ಮಳಿಗೆಯಲ್ಲಿ ಅಧಿಕ ದರ ವಸೂಲಿ ಮಾಡಲಾಗುತ್ತಿದೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಕಡಬದ ಪತ್ರಕರ್ತರೋರ್ವರು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಮಾರುವೇಷದಲ್ಲಿ ಮದ್ಯ ಖರೀದಿಸಿದ್ದರು. ಪತ್ರಕರ್ತನಿಂದ ಅಧಿಕ ದರ ವಸೂಲಿ ಮಾಡಿದ ವೇಳೆ ದಾಳಿ‌ ನಡೆಸಿದ ಅಬಕಾರಿ ನಿರೀಕ್ಷಕಿ ಸುಜಾತ ಹಾಗೂ ಸಿಬ್ಬಂದಿಗಳು, ಅಧಿಕ ದರ ವಸೂಲಿ ದೂರು ಸ್ವೀಕರಿಸಿ, ತಪಾಸಣೆ ನಡೆಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Also Read  ನೂಜಿಬಾಳ್ತಿಲ ಗ್ರಾ.ಪಂ. ಗ್ರಾಮವಿಕಾಸ ಕಾಮಗಾರಿ ಅಪೂರ್ಣ ➤ ಐದು ವರ್ಷ ಕಳೆದರೂ ದಡ ಸೇರದ ಸಭಾಂಗಣದ ಕಾಮಗಾರಿ

error: Content is protected !!
Scroll to Top