ಬೆಳ್ಳಾರೆ ಪಂಚಾಯತ್ ನಿರ್ಣಯ ಮದ್ಯದಂಗಡಿಗಳಿಗೆ ಅನ್ವಯವಿಲ್ಲವೇ..? ➤ ದಲಿತ ಮುಖಂಡ ಆನಂದ ಬೆಳ್ಳಾರೆ ಆಕ್ಷೇಪ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.13. ಬೆಳ್ಳಾರೆ ಗ್ರಾಮ ಪಂಚಾಯತ್ ನ‌ ನಿರ್ಣಯದಂತೆ ಪಂಚಾಯತ್ ವ್ಯಾಪ್ತಿಯಲ್ಲಿ ಬೆಳಗ್ಗೆ 6 ರಿಂದ ಅಪರಾಹ್ನ 2 ಗಂಟೆಯವರೆಗೆ ಮಾತ್ರ ಅಂಗಡಿಗಳು ತೆರೆಯುತ್ತಿದ್ದು, ಆದರೆ ಪೇಟೆಯ ಹೃದಯಭಾಗದಲ್ಲಿರುವ ಮದ್ಯದಂಗಡಿಗಳಿಗೆ ಈ ನಿರ್ಣಯ ಅನ್ವಯವಾಗುವುದಿಲ್ಲವೇ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ವ್ಯಂಗವಾಡಿದ್ದಾರೆ.

ವರ್ತಕರನ್ನು ಕರೆಯದೆ ಗ್ರಾಮ ಪಂಚಾಯತ್ ತನ್ನ ಏಕ ನಿರ್ಧಾರವನ್ನು ತೆಗೆದುಕೊಂಡರೂ ಕೂಡ ಯಾವುದೇ ಆಕ್ಷೇಪವನ್ನು ವ್ಯಕ್ತಪಡಿಸದೆ ಬೆಳ್ಳಾರೆ ಗ್ರಾಮದಲ್ಲಿ ಆರೋಗ್ಯದ ದೃಷ್ಟಿಯಿಂದ ಎಲ್ಲಾ ವರ್ತಕರೂ ಜನ ಸಾಮಾನ್ಯ ರು ಸಹಕರಿಸಿದ್ದಾರೆ. ಆದರೆ ಬೆಳ್ಳಾರೆಯ ಹೃದಯ ಭಾಗದಲ್ಲಿರುವ ಮದ್ಯದಂಗಡಿಗಳು ಗ್ರಾಮ ಪಂಚಾಯತ್ ನ ನಿರ್ಣಯಗಳನ್ನು ಮತ್ತು ಆದೇಶಗಳನ್ನು ಗಾಳಿಗೆ ತೂರಿ ವ್ಯಾಪಾರ ನಡೆಸುತ್ತಿದ್ದರೂ ಗ್ರಾಮ ಪಂಚಾಯತ್ ಕಣ್ಣು ಮುಚ್ಚಿ ಕುಳಿತಿದೆ. ಇಲ್ಲಿ ವರ್ತಕರಿಗೊಂದು ನ್ಯಾಯ ಮತ್ತು ಮದ್ಯದಂಗಡಿಗಳಿಗೆ ಒಂದು ನ್ಯಾಯವೇ ಎಂದು ಪ್ರಶ್ನಿಸಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಪಂಚಾಯತ್ ಆಡಳಿತದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Also Read  ಪ್ರಚೋದನಕಾರಿ ಹೇಳಿಕೆ - ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯ ವಿರುದ್ದ ದೂರು ದಾಖಲು

error: Content is protected !!
Scroll to Top