(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.13. ದುಬೈಯಿಂದ ಮಂಗಳೂರಿಗೆ ತಲುಪಿದ ವಿಮಾನ ಯಾತ್ರಿಕರನ್ನು ಏರ್‌ಪೋರ್ಟ್ ನಲ್ಲಿ ಬಲವಂತದ ಹೋಟೆಲ್ ಕ್ವಾರೈಂಟೇನ್ ಗೆ ಒತ್ತಾಯಿಸಿದ ಬಗ್ಗೆ ಆರೋಪಗಳು ಕೇಳಿಬಂದಿದ್ದು, ಇದರಿಂದ ಜಿಲ್ಲಾಡಳಿತದ ವೈಫಲ್ಯದ ಬಗ್ಗೆ ಅನುಮಾನ ಮೂಡಿದೆ.
ಸರಕಾರ ಗುರುತಿಸಿರುವ ಉಚಿತ ಹಾಸ್ಟೆಲ್ ನಲ್ಲಿ ತಂಗಲು ನಿರ್ಧರಿಸಿದ್ದ ಸುಮಾರು 30 ರಷ್ಟು ಯಾತ್ರಾರ್ಥಿಗಳಿಂದ ಒಂದು ದಿನಕ್ಕೆ 2000/- ರೂಪಾಯಿಯಂತೆ ನೀಡಿ ಹೋಟೆಲ್ ಕ್ವಾರೈಂಟೇನ್ ಸೌಲಭ್ಯವನ್ನು ಪಡೆಯಬೇಕೆಂಬ ಕಟ್ಟುನಿಟ್ಟಿನ ಆದೇಶವನ್ನು ಪಾಲಿಸಲು ಒತ್ತಾಯಪಡಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಜಿಲ್ಲಾಡಳಿತ ನಿಗದಿಪಡಿಸಿದ ಹಾಸ್ಟೆಲ್ ಗಳಲ್ಲಿ ದಾದಿಯರು ಹಾಗೂ ಮೇಲ್ವಿಚಾರಕರ ನೇಮಕವಾಗಿಲ್ಲದೆ ಇರುವುದರಿಂದ ಯಾತ್ರಾರ್ಥಿಗಳನ್ನು ಹೊಟೇಲ್ ಕೊಠಡಿಯಲ್ಲಿ ಇರುವಂತೆ ಒತ್ತಾಯಿಸಲಾಗಿದೆ ಎನ್ನಲಾಗಿದೆ. ಈ ಮೂಲಕ ಕೊರೋನಾ ಸಮಯದಲ್ಲೂ ಕಮಿಷನ್ ದಂಧೆಯ ಕರಾಳ ಅನಾವರಣಗೊಳ್ಳುವಂತೆ ಆಗಿದೆ. ಕೊನೆಗೆ ಯಾತ್ರಾರ್ಥಿಗಳನ್ನು ಒಂದು ಒಂದು ದಿನದ ತಾತ್ಕಾಲಿಕ ಹೋಟೆಲ್ ಕ್ವಾರೈಂಟೇನ್ ನಲ್ಲಿ ಇರಿಸಲಾಗಿದ್ದು, ಇಂದು ಹಾಸ್ಟೆಲ್ ಗೆ ಕಳುಹಿಸುವ ಭರವಸೆ ನೀಡಲಾಗಿದೆ.