ರಾಜ್ಯದಲ್ಲಿ ಇಂದು ಒಂದೇ ದಿನ 63 ಮಂದಿ ಕೊರೋನ ಪಾಸಿಟಿವ್

ಇದೇ ಮೊದಲ ಬಾರಿ ದಾಖಲೆಯ ಹೆಚ್ಚು ಕೇಸು ಪತ್ತೆ

ಬೆಂಗಳೂರು, ಮೇ 12: ರಾಜ್ಯದಲ್ಲಿ ಇಂದು ಹೊಸದಾಗಿ ದಾಖಲೆಯ 63 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬಾಗಲಕೋಟೆಯಲ್ಲಿ 15, ದಾವಣಗೆರೆಯಲ್ಲಿ 12, ಕೋಲಾರ 5, ಗದಗ 3, ಧಾರವಾಡ 9, ಬೀದರ್ 2, ದಕ್ಷಿಣ ಕನ್ನಡ 2 ಹಾಸನ 5, ಬೆಂಗಳೂರು 4, ಚಿಕ್ಕಬಳ್ಳಾಪುರ, ಮಂಡ್ಯ, ಬಳ್ಳಾರಿ ಹಾಗೂ ಕಲಬುರಗಿಯಲ್ಲಿ ತಲಾ 1 ಒಬ್ಬರಿಗೆ ಸೋಂಕು ದೃಢಪಟ್ಟಿದೆ. 925 ಮಂದಿ ಸೋಂಕಿತರ ಪೈಕಿ 433 ಮಂದಿ ಗುಣಮುಖರಾಗಿದ್ದಾರೆ. 31 ಮಂದಿ ಮೃತಪಟ್ಟಿದ್ದಾರೆ.

Also Read  ಬಿಳಿನೆಲೆ: ಅಕ್ರಮ ಶೆಡ್ ವಿವಾದಕ್ಕೆ ತೆರೆ

error: Content is protected !!
Scroll to Top