ಉಡುಪಿ, ಮೇ 12: ಜನಸಾಮಾನ್ಯರ ಬೇಡಿಕೆಯಂತೆ ಮೇ 13ರಂದು ಬೆಳಗ್ಗೆಯಿಂದ ಉಡುಪಿ ಜಿಲ್ಲೆಯೊಳಗೆ ಒಂದಷ್ಟು ಖಾಸಗಿ ಹಾಗೂ ಕೆ ಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಜನಸಾಮಾನ್ಯರ ಓಡಾಟದ ಅನುಕೂಲಕ್ಕಾಗಿ ಜಿಲ್ಲಾಡಳಿತ ಬಸ್ ಓಡಾಟಕ್ಕೆ ಅನುಮತಿ ನೀಡಿದ್ದು, 50 ಶೇಕಡಾಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಯಾವುದೇ ಬಸ್‌ಗಳನ್ನು ತುಂಬುವಂತಿಲ್ಲ. ಒಂದು ವೇಳೆ ಇದನ್ನು ಪ್ರಯಾಣದ ವೇಳೆ ಸಂಬಂಧಿಸಿದ ಬಸ್ ಈ ನಿಯಮ ಪಾಲಿಸದಿರುವುದು ಕಂಡುಬಂದರೆ ಹಾಗೂ ಹೆಚ್ಚಿನ ಪ್ರಯಾಣಕರನ್ನು ಸಾಗಾಟ ಮಾಡಿದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವು ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಸಾರ್ವಜನಿಕರು, ಪ್ರಯಾಣಿಕರು ಕೂಡಾ ಕೊರೋನ ಹರಡಂತೆ ಮುಂಜಾಗ್ರತಾ ಕ್ರಮ ಪಾಲಿಸುವುದು ಕಡ್ಡಾಯವಾಗಿದೆ. ಸಾಮಾಜಿಕ ಅಂತರದ ಪಾಲನೆ ಮಾಡುವುದು ಮತ್ತು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಹಾಗೆಂದು ಮಾಸ್ಕ್‌ಗಳನ್ನು ತಲೆಯಲ್ಲಿ, ಅಥವಾ ಕುತ್ತಿಗೆಯಲ್ಲಿ ನೇತು ಹಾಕಿಕೊಂಡು ನಿಯಮಗಳನ್ನು ಉಲ್ಲಂಘಿಸುವುದು ಕಂಡುಬಂದರೆ ಅಂತವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.