ಮಂಗಳೂರಿನಲ್ಲಿ ಮತ್ತೆ ಇಬ್ಬರಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.12. ಲಾಕ್ ಡೌನ್ ಸಡಿಲವಾದ ಬೆನ್ನಲ್ಲೇ ಕರಾವಳಿಯಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಮಂಗಳವಾರ ಮತ್ತೆ ಇಬ್ಬರಲ್ಲಿ ಕೊರೋನಾ ಪಾಸಿಟಿವ್ ವರದಿಯಾಗಿದೆ.

ಫಸ್ಟ್ ನ್ಯೂರೊ ಆಸ್ಪತ್ರೆಯಲ್ಲಿದ್ದ ಸೋಂಕಿತ ರೋಗಿಯ ಸಂಪರ್ಕದಿಂದ ಮತ್ತೆ ಇಬ್ಬರಿಗೆ ಸೋಂಕು ತಗುಲಿದೆ. 50 ವರ್ಷ ಮಹಿಳೆ ಸೇರಿದಂತೆ 26 ವರ್ಷದ ಯುವಕನಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಇಬ್ಬರು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಇಬ್ಬರೂ ಉಡುಪಿ ಮೂಲದವರೆಂದು ತಿಳಿದುಬಂದಿದೆ.

error: Content is protected !!
Scroll to Top