ರಾಜ್ಯದಲ್ಲಿ ಇಂದು 14 ಮಂದಿಯಲ್ಲಿ ಕೊರೋನಾ ಪತ್ತೆ ➤ ಒಟ್ಟು ಸಂಖ್ಯೆ 862 ಕ್ಕೆ ಏರಿಕೆ



(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.11. ರಾಜ್ಯದಲ್ಲಿ‌ ಕೊರೋನ ಸೋಂಕು ದಿನಂಪ್ರತಿ ಹರಡುತ್ತಿದ್ದು, ಸೋಮವಾರದಂದು ಒಟ್ಟು 14 ಮಂದಿಯಲ್ಲಿ ಹೊಸದಾಗಿ ಕೊರೋನ ಸೋಂಕು ದೃಢಪಟ್ಟಿವೆ.





ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ‌ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಇಂದು 14 ಮಂದಿಗೆ ಕೊರೋನಾ ದೃಢಪಡುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆಯಾಗಿದೆ. ಈ ಪೈಕಿ ದಾವಣಗೆರೆಯಲ್ಲಿ 3, ಬೀದರ್ 2, ಬಾಗಲಕೋಟೆ 2, ಹಾವೇರಿ, ವಿಜಯಪುರ, ಮಂಡ್ಯ, ಬೆಂಗಳೂರು ನಗರ, ಕಲಬುರಗಿ ಹಾಗೂ ಹಾಸನದ ಮಹಿಳೆಯೊಬ್ಬರಿಗೆ ಪಾಸಿಟಿವ್ ಬಂದಿದೆ. ಆಂದ್ರ ಪ್ರದೇಶದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ 426 ಮಂದಿ ಸಂಪೂರ್ಣ ಗುಣಮುಖರಾಗಿದ್ದು, 31 ಮಂದಿ ಮೃತಪಟ್ಟಿದ್ದಾರೆ.






error: Content is protected !!
Scroll to Top