ಕೊರೋನಾ ಲಾಕ್‌ಡೌನ್ ಹಿನ್ನೆಲೆ ➤ ನಾಳೆಯಿಂದ ಕಡಬದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ನಡೆಸಲು ನಿರ್ಧಾರ

ಕಡಬ: ಇತ್ತೀಚಿನ ದಿನಗಳಲ್ಲಿ ಕೊರೊನ ರೋಗವು ಹೆಚ್ಚುತಿರುವುದರಿಂದ ಅದನ್ನು ನಿಯಂತ್ರಿಸಲು ಪ್ರತಿಯೊಬ್ಬ ಗ್ರಾಹಕ ಮತ್ತು ವರ್ತಕರ ಕರ್ತವ್ಯವಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸರಕಾರ ಲಾಕ್ ಡೌನ್ ಮಾಡಿದ್ದು, ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸರಕಾರ ಇತ್ತೀಚೆಗೆ ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 7ರ ತನಕ ತೆರೆದಿಟ್ಟು ವ್ಯವಹಾರ ಮಾಡಲು ಅನುಮತಿ ನೀಡಿತ್ತು. ಆದರೆ ಇದರಿಂದ ಪೇಟೆಯಲ್ಲಿ ಜನಸಂದಣಿ ಹೆಚ್ಚುತ್ತಿದ್ದು ಇದನ್ನು ನಿಯಂತ್ರಿಸಲು ಮೇ.12ರಿಂದ ಕಡಬದಲ್ಲಿ ಬೆಳಿಗ್ಗೆ 7ರಿಂದ ಅಪರಾಹ್ನ 2 ಗಂಟೆಯವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳು ತೆರೆಯಲಿದ್ದು 2 ಗಂಟೆಯ ಬಳಿಕ ಎಲ್ಲಾ ಅಂಗಡಿ ಮುಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತರಾಗಿ ಬಂದ್ ನಡೆಸಲಿದ್ದಾರೆ ಎಂದು ಕಡಬ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್. ಹೇಳಿದ್ದಾರೆ.


ಅವರು ಸೋಮವಾರದಂದು ಹೇಳಿಕೆ ನೀಡಿ, ಕಡಬ ಪೇಟೆಯಲ್ಲಿ ಅಂಗಡಿ ಬಂದ್ ಮಾಡುವ ಬಗ್ಗೆ ನಡೆದ ಸಭೆಯ ಬಳಿಕ ಮಾತನಾಡಿ, ಹೆಚ್ಚಿನವರ ಅಭಿಪ್ರಾಯದಂತೆ ಮಧ್ಯಾಹ್ನ 2 ಗಂಟೆಯ ನಂತರ ಹೆಚ್ಚಿನ ವ್ಯವಹಾರಗಳು ಕಡಿಮೆಯಾಗಿದ್ದು, ನೌಕರರಿಗೆ ಹೋಗಿ ಬರಲು ವಾಹನದ ಸೌಕರ್ಯಗಳು ಇಲ್ಲದ ಕಾರಣ ಈ ಸಮಸ್ಯೆಗಳನ್ನೆಲ್ಲ ಪರಿಗಣಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಆದುದರಿಂದ ಸ್ವಯಂ ಪ್ರೇರಿತರಾಗಿ ಎಲ್ಲರೂ ಬೆಳಗ್ಗೆ 7ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯವಹಾರ ನಡೆಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ಹೇಳಿದರು. ಸಭೆಯಲ್ಲಿ ವರ್ತಕರಾದ ಎಸ್. ಅಬ್ದುಲ್ ಖಾದರ್, ಮಹಮ್ಮದ್ ರಫೀಕ್ ಸುಫಾರಿ ಮರ್ಚಂಟ್, ನರೇಶ್ ಕೀರ್ತಿ ಮೋಟಾರ್ಸ್, ಅನ್ವರ್ ವೆರ್ಯಾಟಿ, ಮೋಹನ್ ಕೊಲ, ಪ್ರದೀಪ್ ಕೋಲ್ಪೆ, ಇಸ್ಮಾಯಿಲ್ ಸುಫಾರಿ ಟ್ರೇಡರ್ಸ್, ಜೋಸ್, ಗೋಪಾಲ್ ನಾಕ್ ಮೇಲಿನ ಮನೆ ಮೊದಲಾದವರು ಉಪಸ್ಥಿತರಿದ್ದರು.

Also Read  ಗಂಗೆಯಲ್ಲಿ ತೇಲಿ ಬಂದ ಪೆಟ್ಟಿಗೆಯಲ್ಲಿತ್ತು 21 ದಿನದ ಕಂದಮ್ಮ..?!

ವರ್ಕ್ ಶಾಪ್ ಗಳಿಗೆ ವಿನಾಯಿತಿ:
ಎಲ್ಲ ವಾಣಿಜ್ಯ ವ್ಯವಹಾರಗಳು ಮಧ್ಯಾಹ್ನ 2 ಗಂಟೆಯವರೆಗೆ ನಡೆದರೆ ಇದರಿಂದ ವಾಹನಗಳ ವರ್ಕ್ ಶಾಪ್ ಗಳಿಗೆ ವಿನಾಯಿತಿ ನೀಡಲಾಗಿದೆ, ವರ್ಕ್ ಶಾಪ್ ಗಳು ಸಂಜೆ 5 ಗಂಟೆಯವರೆಗೆ ಕಾರ್ಯ ನಿರ್ವಹಿಸಲಿದೆ. ಈ ಬಗ್ಗೆ ಸಭೆಯಲ್ಲಿ ಉಪಸ್ಥಿತಿ ಇದ್ದವರ ಅಭಿಪ್ರಾಯದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿವರಾಮ ಎಂ.ಎಸ್. ಹೇಳಿದ್ದಾರೆ.

Also Read  ನಿಯಂತ್ರಣ ತಪ್ಪಿದ ಖಾಸಗಿ ಬಸ್ ಮೂರು ವಾಹನಗಳಿಗೆ ಢಿಕ್ಕಿ- ಮೂವರಿಗೆ ಗಾಯ

error: Content is protected !!
Scroll to Top