(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮೇ.10. ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಳೆ (ಮೇ 11ರಿಂದ ಮುಂದಿನ ಆದೇಶದವರೆಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಮಾತ್ರ ವ್ಯಾಪಾರ ಮಾಡಬಹುದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
2 ಗಂಟೆಯ ಬಳಿಕ ಯಾವುದೇ ಅಂಗಡಿ ಗಳನ್ನು ತೆರೆಯುವಂತಿಲ್ಲ. ಅಂತಹದು ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದ್ದು, ವ್ಯಾಪಾರದ ಸಂದರ್ಭದಲ್ಲಿ ಮತ್ತು ಇತರೆ ಸಂದರ್ಭದಲ್ಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲದಿದ್ದಲ್ಲಿ ದಂಡ ವಿಧಿಸಲಾಗುತ್ತದೆ. ಬೆಳ್ಳಾರೆ ಜ್ಞಾನ ಗಂಗಾ ಶಾಲಾ ಬಳಿ, ಮಾಸ್ತಿಕಟ್ಟೆ ದ್ವಾರದ ಬಳಿ ಹಾಗೂ ಕೆ.ಪಿ.ಎಸ್. ಶಾಲೆಯ ಬಳಿ ಒಟ್ಟು 3 ಕಡೆ ಚೆಕ್ ಪೋಸ್ಟ್ ಗಳು ಇರಲಿದ್ದು, ಚೆಕ್ ಪೋಸ್ಟ್ ಬಳಿ ಪೋಲಿಸರು, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ /ಪಂಚಾಯತ್ ನಿಂದ ನೇಮಕಗೊಂಡ ಸ್ವಯಂ ಸೇವಕರು ಇರಲಿದ್ದಾರೆ.
ಪ್ರತಿ ಚೆಕ್ ಪೋಸ್ಟ್ ಬಳಿ ಟೆಂಪರೇಚರ್ ಟೆಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಬೆಳ್ಳಾರೆ ಠಾಣಾ ಉಪನಿರೀಕ್ಷಕ ಆಂಜನೇಯ ರೆಡ್ಡಿ 9535556173, ಬೆಳ್ಳಾರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಂಜಯ ಕೆ.ಆರ್., 7760381009 ಅಥವಾ ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ ಶಕುಂತಲಾ ನಾಗರಾಜ್ 8722476655 ಸಂಖ್ಯೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.