ಸುಳ್ಯ: ನದಿಯಲ್ಲಿ ಮುಳುಗಿ ಯುವಕ ನೀರುಪಾಲು ➤ ತೀವ್ರಗೊಂಡ ಶೋಧ

(ನ್ಯೂಸ್ ಕಡಬ) newskadaba.com ಸುಳ್ಯ, ಮೇ.09. ನದಿಗೆ ತೆರಳಿದ್ದ ಇಬ್ಬರು ಯುವಕರ ಪೈಕಿ ಓರ್ವ ನೀರು ಪಾಲಾದ ಘಟನೆ ಸುಳ್ಯ ಸಮೀಪದ ಅಡ್ಕಾರು ದೇವಸ್ಥಾನದ ಸಮೀಪ ಶನಿವಾರ ಸಂಜೆ ನಡೆದಿದೆ.

ನೀರು ಪಾಲಾದ ಯುವಕನನ್ನು ಕನಕಮಜಲು ನಿವಾಸಿ ಹರೀಶ್ ಮಳಿ ಎಂಬವರ ಪುತ್ರ ಅಶ್ವಿತ್ ಎಂದು ಗುರುತಿಸಲಾಗಿದೆ. ಅಶ್ವಿತ್ ತನ್ನ ಸ್ನೇಹಿತನೊಂದಿಗೆ ಪಯಸ್ವಿನಿ ನದಿಗೆ ತೆರಳಿ ತೆಪ್ಪದ ಮೂಲಕ ಸ್ವಲ್ಪ ದೂರ ಹೋಗಿ ದಡಕ್ಕೆ ಬಂದಿದ್ದರೆನ್ನಲಾಗಿದೆ. ಬಳಿಕ ಅಶ್ವಿತ್ ಓರ್ವನೇ ತೆಪ್ಪದಲ್ಲಿ ಹೋಗುತ್ತಿದ್ದಾಗ ಬ್ಯಾಲೆನ್ಸ್ ತಪ್ಪಿ ಮಗುಚಿ ನೀರು ಪಾಲಾದರೆಂದು ತಿಳಿದುಬಂದಿದೆ. ಪೊಲೀಸರು, ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿದ್ದು, ಪತ್ತೆ ಕಾರ್ಯ ಆರಂಭಿಸಿದ್ದಾರೆ.

Also Read  ಮಾದಕ ವಸ್ತು ಸೇವನೆ - ಯುವಕರಿಬ್ಬರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

error: Content is protected !!
Scroll to Top