ಮೇ 12ರಂದು ದುಬೈಯಿಂದ ಮಂಗಳೂರಿಗೆ ಪ್ರಥಮ ವಿಮಾನ

ಮಂಗಳೂರು, ಮೇ 8: ಕೊರೋನ ಹಿನ್ನೆಲೆಯಲ್ಲಿ ದುಬೈಯಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಕರಾವಳಿ ಭಾಗದ ಜನರನ್ನು ಹೊತ್ತ ಮೊದಲ ವಿಮಾನವು ಮೇ 12ರಂದು ಮಂಗಳೂರಿಗೆ ಆಗಮಿಸಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ಕೇರಳ ಮತ್ತಿತರ ಭಾಗಗಳ ಜನರನ್ನು ಕರೆ ತರಲು ವಿಮಾನ ವ್ಯವಸ್ಥೆ ಮಾಡಿರುವಾಗ ಕರ್ನಾಟಕ ಕರಾವಳಿಯ ಜನರನ್ನು ಕರೆತರಲು ವ್ಯವಸ್ಥೆ ಮಾಡಿಲ್ಲವೇಕೆ ಎಂದು ಹಲವಾರು ಮಂದಿ ಪ್ರಶ್ನಿಸಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ವಿಮಾನಯಾನ ಸಚಿವರ ಜೊತೆ ಮಾತನಾಡಿ ದುಬೈಯಿಂದ ವಿಮಾನ ಸೇವೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Also Read  ಕಡಬ: ಟೈಲರಿಂಗ್ ತರಬೇತಿಗೆ ಬರುತ್ತಿದ್ದ ಅಪ್ರಾಪ್ತೆಯ ಅತ್ಯಾಚಾರ ➤ ಗರ್ಭಿಣಿ ಆಗಿದ್ದರಿಂದ ಪ್ರಕರಣ ಬೆಳಕಿಗೆ

ಈ ವಿಮಾನದಲ್ಲಿ ಹಿರಿಯ ನಾಗರಿಕರು, ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು, ಗರ್ಭಿಣಿಯರು ಸೇರಿದಂತೆ ತುರ್ತಾಗಿ ತಾಯ್ನಿಡಿಗೆ ಆಗಮಿಸಬೇಕಾಗಿರುವ 177 ಮಂದಿ ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

error: Content is protected !!
Scroll to Top