ಬಜ್ಪೆಯಲ್ಲಿ ಬೈಕಿಗೆ ಟಿಪ್ಪರ್ ಢಿಕ್ಕಿ: ಮಹಿಳೆ ಮೃತ್ಯು

ಮಂಗಳೂರು, ಮೇ 7: ಬೈಕಿಗೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸಹಸವಾರ ಮಹಿಳೆ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಬಜ್ಪೆಯ ಪಾಪಿಲಾನ್ ಬಾರ್ ಸಮೀಪ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ಜೋಕಟ್ಟೆ ನಿವಾಸಿ ಶಶಿಕಲಾ(45) ಎಂದು ಗುರುತಿಸಲಾಗಿದೆ. ಇವರು ತನ್ನ ಪತಿಯೊಂದಿಗೆ ತೆರಳುತ್ತಿದ್ದರು. ಬೈಕ್ ಚಲಾಯಿಸುತ್ತಿದ್ದ ಶಶಿಕಲಾ ಅವರ ಪತಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ ಅಪಘಾತಕ್ಕೆ ಕಾರಣವಾದ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ ಎಂದ ತಿಳಿದು ಬಂದಿದೆ.

Also Read  ಟೊಮ್ಯಾಟೊ ತಂದಿಟ್ಟ ದಾಂಪತ್ಯ ಕಲಹ ಪತ್ನಿಯನ್ನು ಕೇಳದೇ ಟೊಮ್ಯಾಟೊ ಬಳಸಿದ ಪತಿ - ಮನೆಯಿಂದ ಹೊರನಡೆದ ಪತ್ನಿ

error: Content is protected !!
Scroll to Top