ತಪ್ಪು ಮಾಹಿತಿಯಿಂದ ನಡೆದುಕೊಂಡೇ ಊರಿಗೆ ಹೊರಟ ಜಾರ್ಖಂಡ್ ನ ಕಾರ್ಮಿಕರು ➤ ಮನವೊಲಿಸಿ ಮರಳಿ ಕಳುಹಿಸಿದ ಕಡಬ ಆರ್.ಐ. ಅವಿನ್ ರಂಗತ್ತಮಲೆ

(ನ್ಯೂಸ್ ಕಡಬ) newskadaba.com ಕಡಬ, ಮೇ.07. ಸುಬ್ರಹ್ಮಣ್ಯದಲ್ಲಿ ತಂಗಿದ್ದ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರ ಪೈಕಿ ಸುಮಾರು‌ ಹತ್ತು ಜನರ ತಂಡವೊಂದು ನಡೆದುಕೊಂಡು ತೆರಳುತ್ತಿರುವ ಮಾಹಿತಿ ಅರಿತ ಕಡಬದ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆಯವರು ತಕ್ಷಣವೇ ಊಟದ ವ್ಯವಸ್ಥೆ ಕಲ್ಪಿಸಿ ಮರಳಿ ಸುಬ್ರಹ್ಮಣ್ಯಕ್ಕೆ ಕರೆದೊಯ್ದು ಬಿಟ್ಟ ಘಟನೆ ಬುಧವಾರದಂದು ನಡೆದಿದೆ.

ಮಂಗಳೂರಿನಿಂದ‌ ಜಾರ್ಖಂಡ್ ಗೆ ರೈಲು ತೆರಳಲಿದೆ‌ ಎಂಬ ತಪ್ಪು ಮಾಹಿತಿಯಿಂದಾಗಿ ಸುಬ್ರಹ್ಮಣ್ಯದಲ್ಲಿ ತಂಗಿದ್ದ‌ ಹತ್ತರಷ್ಟು ವಲಸೆ ಕಾರ್ಮಿಕರು ನಡೆದುಕೊಂಡೇ ಮಂಗಳೂರಿಗೆಂದು ತೆರಳುತ್ತಿದ್ದರು. ಈ ವೇಳೆ ಮಾಹಿತಿ ಅರಿತ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ಮರ್ಧಾಳ ಸಮೀಪದ ಕಲ್ಲಾಜೆ ಎಂಬಲ್ಲಿ ಅವರನ್ನು ತಡೆದು, ಊಟದ ವ್ಯವಸ್ಥೆ ಕಲ್ಪಿಸಿದ್ದಲ್ಲದೆ ಅವರ ಮನವೊಲಿಸಿ ಮರಳಿ ಸುಬ್ರಹ್ಮಣ್ಯಕ್ಕೆ ಕಳುಹಿಸಿದರು. ಇವರಿಗೆ ಗ್ರಾಮಕರಣಿಕರಾದ ರಂಜನ್, ಶ್ರೀರಾಜ್, ಹರೀಶ್ ಹಾಗೂ ತಹಶಿಲ್ದಾರ್ ಕಛೇರಿಯ ಉದಯ ಕುಮಾರ್ ಸಹಕರಿಸಿದರು.

error: Content is protected !!

Join the Group

Join WhatsApp Group