ಆಲಂಕಾರು: ಗಾಳಿ – ಮಳೆಗೆ ನೆಲಕಚ್ಚಿದ ಬಾಳೆ ತೋಟ ➤ 1500 ಬಾಳೆ ಗಿಡಗಳು ನಾಶ – ಲಕ್ಷಾಂತರ ರೂ.‌ ನಷ್ಟ

ಆಲಂಕಾರು, ಮೇ.06. ಮಂಗಳವಾರ ಬೀಸಿದ ಭಾರಿ ಗಾಳಿ ಮಳೆಗೆ ಆಲಂಕಾರು ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಕೃಷಿ ಹಾಗೂ ಮನೆಗಳಿಗೆ ಹಾನಿ ಉಂಟಾಗಿದೆ. ಸಂಜೆ ವೇಳೆ ಸುಮಾರು ಅರ್ಧ ಗಂಟೆ ಬೀಸಿದ ಗಾಳಿ ಅಪಾರ ಪ್ರಮಾಣದ ಅಡಿಕೆ ಮರಗಳನ್ನು ತೆಂಗಿನ ಮರ ಸೇರಿದಂತೆ ವಿದ್ಯುತ್ ಕಂಬಗಳನ್ನು ಧರೆಗೆ ಉರುಳಿಸಿದ್ದು ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

 

ಆಲಂಕಾರು ಗ್ರಾಮದ ಕೊಂಡಾಡಿ ಅವಿನಾಶ್ ಭಟ್‍ಗೆ ಸೇರಿದ ಬಾಳೆ ತೋಟದ 1500 ಅಧಿಕ ಬಾಳೆ ಗಿಡಗಳು ನೆಲಕ್ಕುರುಳಿದ್ದು ಲಕ್ಷಾಂತರ ರೂಪಯಿ ನಷ್ಟ ಸಂಭವಿಸಿದೆ. ಹೆಚ್ಚಿನ ಬಾಳೆ ಗಿಡಗಳು ಸಂಪೂರ್ಣವಾಗಿ ಗಾಳಿಯ ರಭಸಕ್ಕೆ ನೆಲಕ್ಕಚ್ಚಿದೆ. ಮಾತ್ರವಲ್ಲದೆ ಬುಡೇರಿಯಾ ಗುರುವರವರ ಮನೆಗೆ ಮರ ಬಿದ್ದು ಹಾನಿಯಾಗಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಮಾತ್ರವಲ್ಲದೆ ಪ್ರತೀ ಅಡಿಕೆ ತೋಟದಲ್ಲಿಯು ಅಪಾರ ಪ್ರಮಾಣದ ಅಡಿಕೆ ಮರ, ತೆಂಗಿನ ಮರ , ಬಾಳೆ, ರಬ್ಬರ್ ಮರಗಳು ಗಾಳಿಗೆ ಸಿಲುಕಿ ತುಂಡಾಗಿದ್ದು ಅಪಾರ ಪ್ರಮಾಣದ ವಿದ್ಯುತ್ ಕಂಬಗಳು ತುಂಡಾಗಿದ್ದು ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಘಟನಾ ಸ್ಥಳಗಳಿಗೆ ಆಲಂಕಾರು ಗ್ರಾಮಕರಣಿಕ ರಮೇಶ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರು ಭೇಟಿ ಪರಿಶೀಲಿಸಿದ್ದಾರೆ.

error: Content is protected !!

Join the Group

Join WhatsApp Group