ಪುತ್ತೂರು: 407 ಟೆಂಪೋ ಮೇಲೆ ಉರುಳಿ ಬಿದ್ದ ಬೃಹತ್ ಮರ ➤ ಸಾಲಾಗಿ ಉರುಳಿ ಬಿದ್ದ ವಿದ್ಯುತ್ ಕಂಬಗಳು

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ.05. 407 ಟೆಂಪೋವೊಂದರ ಮೇಲೆ ಬೃಹತ್ ಗಾತ್ರದ ಮರವೊಂದು ಮುರಿದು ಬಿದ್ದ ಪರಿಣಾಮ ಟೆಂಪೋ ಜಖಂಗೊಂಡ ಘಟನೆ ಸುಬ್ರಹ್ಮಣ್ಯ – ಪುತ್ತೂರು ಹೆದ್ದಾರಿಯ ಬೆದ್ರಾಳ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.

ಪುತ್ತೂರು ಕಡೆಗೆ ಅಡುಗೆ ಅನಿಲದ ಸಿಲಿಂಡರ್ ಹೇರಿಕೊಂಡು ಹೋಗುತ್ತಿದ್ದ ಟೆಂಪೋದ ಮೇಲೆ ಬೆದ್ರಾಳ ರೈಲ್ವೇ ಮೇಲ್ಸೇತುವೆ ಸಮೀಪ ಮರ ಬಿದ್ದಿದೆ. ಘಟನೆಯಲ್ಲಿ ವಿದ್ಯುತ್ ಕಂಬಗಳು ಸಾಲಾಗಿ ರಸ್ತೆಗೆ ಉರುಳಿವೆ. ಟೆಂಪೋ ಚಾಲಕ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.

 

error: Content is protected !!