ಅಡಿಕೆ‌ ಕೃಷಿಕರಿಗೆ ಸಂತಸದ ಸುದ್ದಿ ನೀಡಿದ ‘ಕ್ಯಾಂಪ್ಕೋ’ ➤ ಅದೇನೆಂದು ತಿಳಿಯಬೇಕೇ..?

(ನ್ಯೂಸ್ ಕಡಬ) newskadaba.com ಪುತ್ತೂರು, ಮೇ.05. ಅಡಿಕೆ‌ ಕೃಷಿಕರಿಗೆ ಸಂತಸದ ಸುದ್ದಿಯೊಂದು ಹೊರಬಂದಿದ್ದು, ನಾಳೆಯಿಂದ ಎಲ್ಲಾ ದಿನಗಳಲ್ಲಿಯೂ ಕ್ಯಾಂಪ್ಕೋವು ಎಲ್ಲಾ ಶಾಖೆಗಳಲ್ಲಿ ಮಿತಿ ಇಲ್ಲದೆ ಅಡಿಕೆ ಖರೀದಿ ನಡೆಸಲಿದೆ.

ಆರಂಭದಲ್ಲಿ ಒಂದು ತಿಂಗಳಲ್ಲಿ ಗರಿಷ್ಠ ಒಂದು ಕ್ವಿಂಟಾಲ್ ಅಥವಾ 25 ಸಾವಿರ ದವರೆಗೆ ಅಡಿಕೆ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದ ಕ್ಯಾಂಪ್ಕೋ ಬರಬರುತ್ತಾ ಅಡಿಕೆ ಖರೀದಿಯ ಮಿತಿಯನ್ನು ಐದು ಕ್ವಿಂಟಾಲ್ ಗೆ ಏರಿಸಿತ್ತು. ಇದೀಗ ಖರೀದಿಯ ಮಿತಿಯನ್ನು ತೆಗೆದು ಹಾಕಿರುವ ಕ್ಯಾಂಪ್ಕೋ, ಗ್ರಾಹಕರು ತಮಗೆ ಇಷ್ಟ ಬಂದಷ್ಟು ಅಡಿಕೆಯನ್ನು ಮಾರಾಟ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಪುನೀತ್ ರಾಜ್ ಕುಮಾರ್ ಮಾಡುತ್ತಿದ್ದ 1800 ಮಕ್ಕಳ ಜವಾಬ್ದಾರಿ ಹೊತ್ತ ತಮಿಳು ನಟ

error: Content is protected !!
Scroll to Top