ಕಡಬ ತಾಲೂಕಿನ ವಿವಿಧೆಡೆ ಅತಂತ್ರರಾಗಿದ್ದ ಕಾರ್ಮಿಕರು ಮರಳಿ ಹುಟ್ಟೂರಿಗೆ ➤ 7 ಬಸ್ ಗಳಲ್ಲಿ ಊರಿಗೆ ಮರಳಿದ 196 ವಲಸೆ ಕಾರ್ಮಿಕರು

(ನ್ಯೂಸ್ ಕಡಬ) newskadaba.com ಕಡಬ, ಮೇ.05. ಅತಂತ್ರ ವಲಸೆ ಕಾರ್ಮಿಕರಿಗೆ ರಾಜ್ಯದ ಒಳಗಡೆ ಊರಿಗೆ ತೆರಳಲು ಸರಕಾರವು ಉಚಿತ ಅವಕಾಶ ಕಲ್ಪಿಸಿರುವುದರಿಂದ ಸೋಮವಾರ ರಾತ್ರಿ ಕಡಬದಿಂದ 7 ಬಸ್‌ಗಳಲ್ಲಿ ಸುಮಾರು 196 ಮಂದಿ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿ ಕೊಡಲಾಯಿತು.

ಕಡಬ ತಾಲೂಕು ತಹಸೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಅವರು ಪಿಡಿಒಗಳ ಮೂಲಕ, ಊರಿಗೆ ತೆರಳಲಿರುವ ವಲಸೆ ಕಾರ್ಮಿಕರ ಪಟ್ಟಿಯನ್ನು ಪಡೆದು ಗದಗ, ಕೊಪ್ಪಳ, ಹಾವೇರಿ, ಬಳ್ಳಾರಿ, ಬೆಳಗಾವಿ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಧಾರವಾಡ, ಶಿರಸಿ, ಹುಬ್ಬಳ್ಳಿ, ಬಿಜಾಪುರ, ಯಾದಗಿರಿ, ಬಾಗಲಕೋಟೆ, ಹಾಸನ, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ತೆರಳಲು ಜಿಲ್ಲಾಧಿಕಾರಿಯವರ ಅನುಮತಿಯನ್ನು ಪಡೆದು ಸಂಜೆ ಕಡಬ ತಹಶೀಲ್ದಾರ್ ಕಛೇರಿಯ ಬಳಿಯಿಂದ ಹಾಗೂ ಸುಬ್ರಹ್ಮಣ್ಯದಿಂದ ಏಳು ಬಸ್‌ಗಳ ಮೂಲಕ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿದ್ದಾರೆ.

Also Read  ಈಜು ಬಾರದೆ ಮೂವರು ಯುವಕರು ನೀರುಪಾಲು

ಈ ಮೊದಲು ಕಾರ್ಮಿಕರಿಗೆ ಕಡಬ ವೈದ್ಯಾಧಿಕಾರಿಯ ಮೂಲಕ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಸುಬ್ರಹ್ಮಣ್ಯ ದೇವಸ್ಥಾನದಿಂದ ಆಹಾರದ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಅವರವರ ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ವಿವಿಧ ಗ್ರಾಮ ಕರಣಿಕರು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!
Scroll to Top