ಉಡುಪಿ: ನಾಳೆಯಿಂದ ಲಾಕ್‌ಡೌನ್ ಮತ್ತಷ್ಟು ಸಡಿಲಿಕೆ

ಉಡುಪಿ, ಮೇ 4: ಜಿಲ್ಲೆಯಲ್ಲಿ ಮಂಗಳವಾರದಿಂದ ಲಾಕ್‌ಡೌನ್ ಮತ್ತಷ್ಟು ಸಡಿಲಿಕೆಯಾಗಲಿದ್ದು, ಖರೀದಿಗೆ ಹೆಚ್ಚಿನ ಸಮಯ ಸಿಗಲಿದ್ದು, ಬೆಳಗ್ಗೆ 7ರಿಂದ ಸಂಜೆ 7ರ ತನಕ ಅಂಗಡಿಗಳು ಕಾರ್ಯಾಚರಿಸಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿರುವ ಐದು ಶಾಸಕರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೋಮವಾರದಂದು ಜನರ ಪ್ರತಿಕ್ರಿಯೆಗಳನ್ನು ಗಮನಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮಂಗಳವಾರದಂದು ವೈನ್‌ಶಾಪ್ ಮಾತ್ರ ಕಾರ್ಯಾಚರಣೆ ನಡೆಸಲಿದ್ದು, ಬಾರ್ ಓಪನ್ ಇಡಲು ಅವಕಾಶಗಳಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Also Read  ಪ್ರವೀಣ್ ನೆಟ್ಟಾರು ಕೊಲೆ- ಮೂವರು ಹಂತಕರ ಬಂಧನ ➤‌ ಎಡಿಜಿಪಿ ಅಲೋಕ್ ಕುಮಾರ್ ಅಧಿಕೃತ ಮಾಹಿತಿ

error: Content is protected !!
Scroll to Top