ಮದ್ಯ ಸಿಕ್ಕಿದ ಕೆಲವೇ ಕ್ಷಣದಲ್ಲಿ ಒಂದು ವಿಕೆಟ್ ಪತನ…!! ➤ ಕಂಠಪೂರ್ತಿ ಮದ್ಯ ಕುಡಿದು ರಸ್ತೆಯಲ್ಲಿ ಬಿದ್ದ ಮದ್ಯಪಾನಿ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಮೇ.04. ಕಳೆದ ಒಂದೂವರೆ ತಿಂಗಳಿನಿಂದ ಮುಚ್ಚಲಾಗಿದ್ದ ಮದ್ಯದಂಗಡಿಯನ್ನು ತೆರೆಯಲು ಸರಕಾರವು ಆದೇಶ ಹೊರಡಿಸಿದ್ದೇ ತಡ ಮದ್ಯ ಪ್ರಿಯರು ಸರತಿ ಸಾಲಿನಲ್ಲಿ ನಿಂತು ಮದ್ಯಕ್ಕಾಗಿ ಕಾಯುತ್ತಿದ್ದ ದೃಶ್ಯ ದೇಶದಾದ್ಯಂತ ಕಂಡುಬಂತು‌.

ಅದರಲ್ಲೂ ಮದ್ಯ ಪ್ರಿಯನೊಬ್ಬ 40 ದಿನದ ಮದ್ಯದ ಆಸೆಯನ್ನು ಒಂದೇ ಗಂಟೆಯಲ್ಲಿ ಈಡೇರಿಸಿಕೊಂಡು ರಸ್ತೆ ಮಧ್ಯೆ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆದಿದೆ. ಬೆಳಗ್ಗೆ 6 ಗಂಟೆಯಿಂದ ಮದ್ಯದಂಗಡಿಯ ಮುಂದೆ ಕ್ಯೂನಲ್ಲಿ ನಿಂತು ಕಾಯುತ್ತಿದ್ದ ಅಸಾಮಿ ಮದ್ಯ ದೊರೆತ ಕೂಡಲೇ ಕಂಠಪೂರ್ತಿ ಕುಡಿದು ಫೋನಿನಲ್ಲಿ ಮಾತನಾಡುತ್ತಾ ರಸ್ತೆ ಮಧ್ಯೆಯೇ ತೂರಾಡಿಕೊಂಡು ಬಂದು ಅಲ್ಲಿಯೇ ಬಿದ್ದಿದ್ದಾನೆ. ಜೇಬಲ್ಲಿ ಮದ್ಯದ ಬಾಟಲ್ ಹಾಗೆಯೇ ಇದ್ದು, ಸಾರ್ವಜನಿಕರು ಓಡಾಡುವ ಸ್ಥಳವಾದ್ದರಿಂದ ಆತನ ಜೇಬಿನಲ್ಲೇ ಮದ್ಯವು ಉಳಿದಿದೆ‌.

Also Read  ಭಯೋತ್ಪಾದನೆಗೆ ಬಿಟ್ ಕಾಯಿನ್ ನಂಟು..? ಮಂಗಳೂರು ಕುಕ್ಕರ್ ಸ್ಫೋಟ, ಶಿವಮೊಗ್ಗ ಪ್ರಕರಣದಲ್ಲೂ ಬಳಕೆ..!!

ಇನ್ನೊಂದೆಡೆ ಮಣಿಪಾಲದಲ್ಲಿ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರು ಯಾವುದೇ ಮುಲಾಜಿಲ್ಲದೆ ಮದ್ಯಕ್ಕಾಗಿ ಕ್ಯೂನಲ್ಲಿ ನಿಂತು ಕಾಯುತ್ತಿದ್ದ ದೃಶ್ಯವು ಕಂಡುಬಂತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯ ಸಿಗದೆ ಕಂಗಾಲಾಗಿದ್ದ ಯುವತಿಯರು ಮದ್ಯದಂಗಡಿ ತೆರೆದ ಖುಷಿಯಲ್ಲಿ ಯಾವುದೇ ಮುಜುಗರವಿಲ್ಲದೆ ಕಾದು ಮದ್ಯ ಖರೀದಿಸಿ ತಮ್ಮ ಆಸೆಯನ್ನು ತೀರಿಸಿದ್ದಾರೆ.

error: Content is protected !!
Scroll to Top