ಬೆಳಿಗ್ಗೆಯಿಂದಲೇ ಮದ್ಯದಂಗಡಿಯ‌ ಮುಂದೆ ಗ್ರಾಹಕರ ಸರತಿ ಸಾಲು ➤ ನೂಕುನುಗ್ಗಲು ನಿಯಂತ್ರಿಸುವುದು ಪೊಲೀಸರಿಗೆ ಸವಾಲು

(ನ್ಯೂಸ್ ಕಡಬ) newskadaba.com ಕಡಬ, ಮೇ.04. ಕಳೆದ ಒಂದೂವರೆ ತಿಂಗಳಿನಿಂದ ಮುಚ್ಚಲಾಗಿದ್ದ ಮದ್ಯದಂಗಡಿಯನ್ನು ತೆರೆಯಲು ಸರಕಾರವು ಆದೇಶ ಹೊರಡಿಸಿದ್ದೇ ತಡ ಮದ್ಯ ಪ್ರಿಯರು ಸರತಿ ಸಾಲಿನಲ್ಲಿ ನಿಂತು ಮದ್ಯಕ್ಕಾಗಿ ಕಾಯುತ್ತಿದ್ದ ದೃಶ್ಯ ಸೋಮವಾರದಂದು ಕಡಬದಲ್ಲಿ ಕಂಡುಬಂತು‌.

ಕಡಬದ ಪಂಜ ರಸ್ತೆಯಲ್ಲಿರುವ ಎಂಎಸ್ಐಎಲ್ ಮತ್ತು ಕೊರುಂದೂರು ಎಂಬಲ್ಲಿರುವ ಪ್ರಶಾಂತ್ ವೈನ್ ಶಾಪ್ ಮುಂದೆ ಮದ್ಯ ಪ್ರಿಯರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬರುತ್ತಿದೆ. ಗ್ರಾಹಕರು ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಮದ್ಯ ಮಾರಾಟಗಾರರು ಪೈಪ್ ಗಳನ್ನು ಕಟ್ಟಿ ವ್ಯವಸ್ಥೆ ಮಾಡಿದ್ದಾರೆ. ಆದರೂ ಕೆಲವು ಗ್ರಾಹಕರು ನೂಕು ನುಗ್ಗಲು ಉಂಟು ಮಾಡಿದ್ದರಿಂದ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

Also Read  ಅತ್ತಿಗೆಗೆ ಸೇರಬೇಕಾದ ಇನ್ಶುರೆನ್ಸ್ ಹಣವನ್ನೇ ಲೂಟಿ ಮಾಡಿದ ಪಾಪಿ ಮೈದುನ!

 

error: Content is protected !!
Scroll to Top