ಕುಂತೂರು: ರಸ್ತೆ ಅಪಘಾತ ➤ ಮರ್ಧಾಳ ಪಂಚಾಯತ್ ಪಿಡಿಓ ಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಮೇ.02. ಬೈಕೊಂದು ಸ್ಕಿಡ್ ಆಗಿ‌ ಉರುಳಿ ಬಿದ್ದ ಪರಿಣಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೋರ್ವರು ಗಾಯಗೊಂಡ ಘಟನೆ ಉಪ್ಪಿನಂಗಡಿ – ಕಡಬ ರಾಜ್ಯ ಹೆದ್ದಾರಿಯ ಕುಂತೂರು ಎಂಬಲ್ಲಿ ಶನಿವಾರದಂದು ಸಂಭವಿಸಿದೆ.

ಮರ್ಧಾಳ ಹಾಗೂ ಐತ್ತೂರು ಗ್ರಾಮ ಪಂಚಾಯತ್ ನ ಪಿಡಿಒ ಶೇಖರ್ ಅವರು ತನ್ನ ಮನೆಯಿಂದ ಮರ್ಧಾಳ ಕಡೆಗೆ ಆಗಮಿಸುತ್ತಿದ್ದ ವೇಳೆ ಕುಂತೂರು ಪದವು ಎಂಬಲ್ಲಿ ಬೈಕ್ ಸ್ಕಿಡ್ ಆಗಿದೆ. ಗಾಯಗೊಂಡವರನ್ನು ಪುತ್ತೂರು ಆಸ್ಪತ್ರೆ ಗೆ ಕರೆದೊಯ್ಯಲಾಗಿದೆ.

error: Content is protected !!
Scroll to Top