ಬೆಂಗಳೂರು, ಮೇ.01. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿದ್ದ ಸರಕಾರವು ಕೆಲವೊಂದು ಷರತ್ತುಗಳನ್ನು ವಿಧಿಸಿ ಮೇ 04 ರಿಂದ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಟ್ಟಿದೆ.
ಕನಿಷ್ಠ 6 ಅಡಿ ಅಂತರ ಕಾಯಬೇಕಾಗಿದ್ದು, ಕೇವಲ 5 ಜನ ಮಾತ್ರ ಮದ್ಯ ಖರೀದಿಸುವ ಸ್ಥಳದಲ್ಲಿರಬೇಕೆಂಬ ಷರತ್ತನ್ನು ಸರಕಾರವು ವಿಧಿಸಿದೆ. ಸಾರ್ವಜನಿಕವಾಗಿ ಮದ್ಯ ಸೇವನೆ ಮಾಡದೆ, ಪಾರ್ಸೆಲ್ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯು ಆರೆಂಜ್ ಝೋನ್ ನಲ್ಲಿ ಇರುವ ಕಾರಣ ಕಾರಣ ಇಲ್ಲಿ ಮದ್ಯ ಮಾರಾಟಕ್ಕೆ ಅವಕಾಶವನ್ನು ನೀಡಿಲ್ಲ. ಉಳಿದಂತೆ ಗ್ರೀನ್ ಝೋನ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ.