(ನ್ಯೂಸ್ ಕಡಬ) newskadaba.com ಮಂಗಳೂರು, ಎ.30. ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮೂರನೇ ಬಲಿಯಾಗಿದ್ದು, ಬಂಟ್ವಾಳದ ಕೊರೋನಾ ಪೀಡಿತ ವೃದ್ದೆಯೋರ್ವರು ಚಿಕಿತ್ಸೆ ಫಲಿಸದೇ ಗುರುವಾರದಂದು ಮೃತಪಟ್ಟಿದ್ದಾರೆ.
ಎ.21ರಂದು ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬಂಟ್ವಾಳ ಕಸಬಾದ 69 ವರ್ಷದ P-409 ವೃದ್ದೆ ಕೊರೋನಾಗೆ ಬಲಿಯಾಗಿದ್ದಾರೆ. ಇವರಿಗೆ ಎ.19ರಂದು ಮೃತಪಟ್ಟಿದ್ದ ಬಂಟ್ವಾಳದ ಮಹಿಳೆಯಿಂದ ಸೋಂಕು ಹರಡಿತ್ತು ಎನ್ನಲಾಗಿದೆ.