ರಾಜ್ಯದ ಐವರು ಸಚಿವರು ಕ್ವಾರೆಂಟೈನ್‌ಗೆ

ಬೆಂಗಳೂರು, ಎ.30: ಕರ್ನಾಟಕದ ಐವರು ಸಚಿವರು ಕೊರೋನಾ ಪರೀಕ್ಷೆಯನ್ನು ನಡೆಸಿದ್ದು, ಕ್ಯಾಮರಾ ಮ್ಯಾನ್ ಜೊತೆ ಸಂಪರ್ಕಕ್ಕೆ ಬಂದ ಕಾರಣದಿಂದ ಸಚಿವರು ಪರೀಕ್ಷೆಯನ್ನು ನಡೆಸಿದ್ದಾರೆ.

ಮೂವರು ಸಚಿವರ ವರದಿಗಳು ಈಗಾಗಲೇ ಬಂದಿದೆ. ಡಿಸಿಎಂ ಅಶ್ವಥ್ ನಾರಾಯಣ್, ಸಚಿವರಾದ ಸಿ.ಟಿ. ರವಿ, ಬಸವರಾಜ ಬೊಮ್ಮಾಯಿ, ಡಾ.ಕೆ. ಸುಧಾಕರ್ ಅವರ ಕೊರೋನಾ ಟೆಸ್ಟ್ ವರದಿ ನೆಗೆಟಿವ್ ಬಂದಿದೆ. ಖಾಸಗಿ ವಾಹಿನಿ ಕ್ಯಾಮೆರಾಮ್ಯಾನ್ ಸಂಪರ್ಕಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಐವರು ಸಚಿವರು ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಇತ್ತೀಚೆಗೆ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರದಲ್ಲಿ ಭಾಗವಹಿಸಿದ್ದ ಶಾಸಕ ಜಮೀರ್ ಅಹ್ಮದ್ ಅವರು ಕೂಡ ಕೊರೋನಾ ಟೆಸ್ಟ್ ನಡೆಸಿದ್ದರು. ಈ ವೇಳೆ ನೆಗೆಟಿವ್ ವರದಿ ಬಂದಿತ್ತು. ತಾವು ಕ್ವಾರೆಂಟೈನ್ ನಲ್ಲಿರುವ ಕುರಿತು ಸಚಿವರೇ ಟ್ವೀಟ್ ಮೂಲಕ ಮಾಹಿತಿಯನ್ನು ನೀಡಿದ್ದಾರೆ.

Also Read  ಹಾಸನ : ಬೈಕ್ ಮತ್ತು ಕಾರಿನ ನಡುವೆ ಅಪಘಾತ ಪ್ರಕರಣ ➤ ಚಿಕಿತ್ಸೆ ಫಲಿಸದೆ ಬಾಲಕ ಮೃತ್ಯು ..!    

error: Content is protected !!
Scroll to Top