ಬಂಟ್ವಾಳ: ಮಲಗಿದ್ದಲ್ಲೇ ಮಾಜಿ ಸೈನಿಕ ನಿಧನ; ಐದು ದಿನಗಳ ಬಳಿಕ ಪ್ರಕರಣ ಬೆಳಕಿಗೆ

ಬಂಟ್ವಾಳ, ಎ.29: ಮಾಜಿ ಸೈನಿಕರೊಬ್ಬರು ಮನೆಯಲ್ಲಿ ಮಲಗಿದ್ದಲ್ಲೇ ಮೃತಪಟ್ಟಿದ್ದು, 5 ದಿನಗಳ ಬಳಿಕ ವಿಚಾರ ಬೆಳಕಿಗೆ ಬಂದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಕಲ್ಲು ಗ್ರಾಮದ ಪಲ್ಲೊಟ್ಟು ಎಂಬಲ್ಲಿ ನಡೆದಿದೆ.

ಮೃತರನ್ನು ಮಾಜಿ ಸೈನಿಕ ಅವಿವಾಹಿತ ರಿಚಾರ್ಡ್ ಫೆರ್ನಾಂಡಿಸ್(50) ಎಂದು ಗುರುತಿಸಲಾಗಿದೆ.

ದಿನ ನಿತ್ಯ ಇವರು ಹತ್ತಿರದ ಹಾಲಿನ ಡೈರಿಗೆ ಹಾಲು ಕೊಂಡುಹೋಗುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಹಾಲಿನ ಡೈರಿಗೆ ಬರದೇ ಇರುವುದನ್ನು ಗಮನಿಸಿ ಮನೆಯತ್ತ ಸ್ಥಳೀಯರು ಬಂದು ಗಮನಿಸಿದ ಸಂದರ್ಭದಲ್ಲಿ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

ಮನೆಯಲ್ಲಿ ಮಾಜಿ ಸೈನಿಕ ಸೇರಿದಂತೆ ಇಬ್ಬರು ಅಕ್ಕಂದಿರು ಇದ್ದಾರೆ. ಇವರಲ್ಲಿ ಮೂವರು ಅವಿವಾಹಿತರು. ಇಬ್ಬರು ಅಕ್ಕಂದಿರು ಮಾನಸಿಕವಾಗಿ ಅಸ್ವಸ್ಥತೆ ಯಾಗಿದ್ದರು. ಹಾಗಾಗಿ ಸೈನಿಕ ಮೃತಪಟ್ಟ ವಿಚಾರದ ಬಗ್ಗೆ ಅಷ್ಟು ತಲೆಕೆಡಸಿಕೊಂಡಿಲ್ಲ.

Also Read  ಮಂಗಳೂರು: ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಚೀಟಿ ದುರುಪಯೋಗ ➤ ಸೂಕ್ತ ಕ್ರಮದ ಎಚ್ಚರಿಕೆ

ನೆರೆಮನೆಯವರು ಬಂದು ನೋಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಬಳಿಕ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ.ಪ್ರಸನ್ನ ಹಾಗೂ ಸಿಬ್ಬಂದಿ ಭೇಟಿ ನೀಡಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!
Scroll to Top