ಲಾಕ್‌ಡೌನ್ ನಡುವೆ ಕಡಬ ಪೊಲೀಸರ ಮಿಂಚಿನ ಕಾರ್ಯಾಚರಣೆ ➤ ಕುಖ್ಯಾತ ಕಳ್ಳನ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಎ.29. ಠಾಣಾ ವ್ಯಾಪ್ತಿಯ ರಾಮಕುಂಜದಲ್ಲಿ ಇತ್ತೀಚೆಗೆ ಎಸ್.ಬಿ.ಐ ಸೇವಾ ಕೇಂದ್ರ, ಮೊಬೈಲ್ ಅಂಗಡಿ, ಕಾಲೇಜು, ಪಂಚಾಯತ್ ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಯಲ್ಲಿ ಒಟ್ಟು 16 ಪ್ರಕರಣಗಳಲ್ಲಿ ಭಾಗವಹಿಸಿದ್ದ ಕುಖ್ಯಾತ ಕಳ್ಳನನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಕಡಬ ಎಸ್.ಐ.ರುಕ್ಮ ನಾಯ್ಕ್ ನೇತೃತ್ವದ ತಂಡ ಬಂಧಿಸಿದೆ.

ಬಂಧಿತನನ್ನು ಬಂಟ್ವಾಳ ತಾಲೂಕು ಸಜಿಪನಡು ಪೆರುವ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಉಮ್ಮರ್ ಫಾರೂಕ್(27ವ.) ಎಂದು ಗುರುತಿಸಲಾಗಿದೆ. ಬಂಧಿತನಿಂದ ಕಳ್ಳತನಕ್ಕೆ ಬಳಸಿದ ರಾಡ್, ಅಲ್ಲದೆ ಕೆಲವು ಸಾಮಾಗ್ರಿಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದು, ಬುಧವಾರದಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿ ಫಾರೂಖ್ ತನ್ನ ಜೊತೆಗಾರ ಫಯಾನ್ ಎಂಬಾತನೊಂದಿಗೆ ಸೇರಿ ಕಳೆದ ಕೆಲವು ದಿನಗಳ ಹಿಂದೆ ರಾಮಕುಂಜದಲ್ಲಿ ಎಸ್.ಬಿ.ಐ. ಗ್ರಾಹಕರ ಸೇವಾ ಕೇಂದ್ರ, ಮೊಬೈಲ್ ಅಂಗಡಿ, ಪಂಚಾಯತ್ ಹಾಗೂ ಕಾಲೇಜಿನ ಬೀಗ ಮುರಿದು ಕಳ್ಳತನ ನಡೆಸಿದ್ದಾನೆ‌ ಎನ್ನಲಾಗಿದೆ. ಫಯಾನ್ ನನ್ನು ಈಗಾಗಲೇ ಬೇರೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಕೊಣಾಜೆ ಠಾಣೆಯ ಪೋಲಿಸರು ಬಂಧಿಸಿದ್ದಾರೆ. ಉಮ್ಮರ್ ಫಾರೂಕ್ ವಿರುದ್ದ ಈಗಾಗಲೇ ಕಡಬ ಠಾಣೆಯಲ್ಲಿ-4, ಉಪ್ಪಿನಂಗಡಿ ಠಾಣೆಯಲ್ಲಿ-2, ಬಂಟ್ವಾಳ ಠಾಣೆಯಲ್ಲಿ-3, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ-2, ಕೊಣಾಜೆ ಠಾಣೆಯಲ್ಲಿ-5 ಒಟ್ಟು 16 ಪ್ರಕರಣ ದಾಖಲಾಗಿದೆ.

Also Read  ಜನವರಿ 22 ರಂದು ತಾ.ಪಂ. ವಾರ್ಷಿಕ ಜಮಾಬಂದಿ

ಈಗಾಗಲೇ ಕೊರೋನಾದಿಂದ ಲಾಕ್ಡೌನ್ ಇರುವುದರಿಂದ ಇದರ ಕೆಲಸವೇ ಸಾಕಷ್ಟು ಇರುವ ಮಧ್ಯೆ ಈ ಕುತ್ಯಾತ ಕಳ್ಳನಿಗೆ ಕೆಲ ದಿನಗಳಿಂದಲೇ ಪೋಲಿಸರು ಬಲೆ ಬೀಸಿದ್ದಾರೆ. ಈಗಾಗಲೇ ಕಡಬದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಡಬ ಪೋಲಿಸರು ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಂಡಿರುವ ಮಧ್ಯೆ ಈ ಕುಖ್ಯಾತ ಕಳ್ಳನನ್ನು ಬಂಧಿಸಿರುವ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ವಿಕ್ರಮ್ ಅಮ್ಟೆ, ಡಿವೈಎಸ್ಪಿ ದಿನಕರ ಶೆಟ್ಟಿ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ನಾಗೇಶ್ ಕದ್ರಿಯವರ ಮಾರ್ಗದರ್ಶನದಲ್ಲಿ ಕಡಬ ಎಸ್.ಐ. ರುಕ್ಮ ನಾಯ್ಕ್, ಅಪರಾಧ ವಿಭಾಗದ ಎ.ಎಸ್.ಐ ಚಿದಾನಂದ ರೈ, ಹೆಡ್ ಕಾನ್ಸ್‌ಟೇಬಲ್ ಗಳಾದ ಸ್ಕರಿಯ, ವಸಂತ ಗೌಡ, ಕಾನ್ಸ್‌ಟೇಬಲ್ ಗಳಾದ ಭವಿತ್ ರೈ, ಮಹೇಶ್, ರಕ್ಷಿತ್ ರೈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Also Read  ನೇತ್ರ ಪರೀಕ್ಷಾ ಶಿಬಿರ

error: Content is protected !!
Scroll to Top