(ನ್ಯೂಸ್ ಕಡಬ) newskadaba.com ಮಂಗಳೂರು, ಎ.28. ಕೊರೋನಾ ಸೋಂಕಿನಿಂದಾಗಿ ರೆಡ್ ಝೋನ್ ಆಗಿ ಘೋಷಣೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯು ಸದ್ಯ ಆರೆಂಜ್ ಝೋನ್ ಆಗಿದ್ದು, ಜನತೆಯ ಆತಂಕ ಸ್ವಲ್ಪ ಮಟ್ಟಿಗೆ ದೂರವಾದಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳನ್ನು ವಿಂಗಡಿಸಲಾಗಿದ್ದು, ಮಂಗಳೂರು, ಬಂಟ್ವಾಳ ಹಾಗೂ ಪುತ್ತೂರು ತಾಲೂಕುಗಳನ್ನು ಆರೆಂಜ್ ಝೋನ್ ಆಗಿ ವಿಭಜಿಸಲಾಗಿದೆ. ಕಡಬ, ಸುಳ್ಯ, ಬೆಳ್ತಂಗಡಿ, ಉಳ್ಳಾಲ, ಮೂಡುಬಿದಿರೆ ತಾಲೂಕುಗಳಲ್ಲಿ ಯಾವುದೇ ಆಕ್ಟಿವ್ ಪ್ರಕರಣಗಳಿಲ್ಲದ ಹಿನ್ನಲೆಯಲ್ಲಿ ಗ್ರೀನ್ ಝೋನ್ ಆಗಿ ಘೋಷಿಸಲಾಗಿದೆ.