ಸಕ್ರಿಯವಾಗಿದೆ ಒಟಿಪಿ ಮೂಲಕ ಬ್ಯಾಂಕಿನಿಂದ ಹಣ ದೋಚುವ ಜಾಲ ➤ ಅಪರಿಚಿತ ಕರೆಗೆ ಉತ್ತರಿಸುವ ಮುನ್ನ ಏನು ಮಾಡಬೇಕು..?

(ನ್ಯೂಸ್ ಕಡಬ) newskadaba.com ಕಡಬ, ಎ.27. ಇತ್ತೀಚಿನ ದಿನಗಳಲ್ಲಿ ಕೊರೋನಾ (ಕೋವಿಡ್ -19) ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಈ ಬಗ್ಗೆ ಮಾನ್ಯ ಪ್ರಧಾನ ಮಂತ್ರಿಗಳ, ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ಖಾತೆಗೆ ಹಣ ಕಳುಹಿಸುವರೇ ಹಾಗೂ ಸಾರ್ವಜನಿಕವಾಗಿ ಖಾಸಗಿ ಸಂಸ್ಥೆಗಳು ಪರಿಹಾರಕ್ಕಾಗಿ ಅಥವಾ ದೇಣಿಗೆ ನೀಡಬೇಕೆಂದು ನಕಲಿ ಸಂಸ್ಥೆಗಳು ಕರೆ ಅಥವಾ ಸಾಮಾಜಿಕ ಜಾಲತಾಣಗಳ ಮುಖಾಂತರ ಕಾರ್ಯಾಚರಿಸುತ್ತಿವೆ.

ಈ ಮೂಲಕ ಎಲ್ಲಾ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನ ಗೊಂಡಿದ್ದು, ಈ ವಿಷಯವನ್ನು ಮುಂದಿಟ್ಟುಕೊಂಡು ಕೆಲವು ಹಿಂದಿ ಭಾಷೆ ಮಾತನಾಡುವ ಕಿಡಿಗೇಡಿಗಳು, ಅಥವಾ ಕೆಲವು ಸಂಸ್ಥೆಗಳು ನಿಮಗೆ ಫೋನ್ ಮಾಡಿ ನಿಮ್ಮ ಬ್ಯಾಂಕಿನ ಮಾಹಿತಿಗಳನ್ನು ಪಡೆದು ಹಣವನ್ನು ವಂಚಿಸುವ (OTP ನಂಬರ್) ಸಾಧ್ಯತೆಗಳು ಹೆಚ್ಚು ಇರುವುದರಿಂದ ಯಾರೂ ದಯಮಾಡಿ ಬ್ಯಾಂಕಿನ ಮಾಹಿತಿಗಳನ್ನು ನೀಡಬಾರದಾಗಿ ಕೋರಿಕೆ. ಜೊತೆಗೆ ಯಾವುದೇ ಬ್ಯಾಂಕಿನವರು ಫೋನಿನ ಮೂಲಕ ಅಕೌಂಟ್ ನ ಮಾಹಿತಿ ಕೇಳುವುದಿಲ್ಲ.

Also Read  ಬಿಸಿಲಿನ ಬೇಗೆಗೆ ಜನ ತತ್ತರ..!   ➤ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸಲಹೆ.!

ಇಂತಹ ಸಂಸ್ಥೆಗಳು ತಮ್ಮ ಖಾತೆಯಲ್ಲಿರುವ ಹಣದ ಬಗ್ಗೆ ಮಾಹಿತಿ ನೀಡಿ ಎಂದು ನಕಲಿ ಕರೆಗಳು ಬರುತ್ತಿದ್ದು, ಅಂತಹ ಕರೆಗಳನ್ನು ನಿರ್ಲಕ್ಷಿಸಬೇಕು, ಯಾವುದೇ ಕಾರಣಕ್ಕೂ ನಕಲಿ ಕರೆಗಳನ್ನು ಸ್ವೀಕರಿಸಬಾರದು ಹಾಗೂ ತಮ್ಮ ಬ್ಯಾಂಕ್ ಅಕೌಂಟ್ ಗೆ ಸಂಬಂಧಿಸಿದಂತಹ ATM PIN Number, ATM 16 Digit Number, CVV/CVC Number ,OTP Number, Bank Account number , IFSC number, MICR Number ಮುಂತಾದ ಗೌಪ್ಯ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಯಾರಿಗೂ ನೀಡಬಾರದು. ಈ ಬಗ್ಗೆ ಏನಾದರೂ ಸಂದೇಹಗಳಿದ್ದಲ್ಲಿ ಸಂಬಂಧಿಸಿದ ಬ್ಯಾಂಕ್ ಗಳಿಗೆ ಅಥವಾ ತಮ್ಮ ತಮ್ಮ ಬೀಟ್ ಪೊಲೀಸರಲ್ಲಿ ಹಾಗೂ ಬೆಳ್ಳಾರೆ ಪೊಲೀಸ್ ಉಪ ನಿರೀಕ್ಷಕರಲ್ಲಿ ದೂರವಾಣಿ ಅಥವಾ ಠಾಣೆಗೆ ಹಾಜರಾಗಿ ಮಾಹಿತಿ ನೀಡತಕ್ಕದ್ದು ಎಂದು ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ ಆಂಜನೇಯ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಶಾಸಕ ಎಸ್.ಅಂಗಾರರ ಪತ್ನಿಗೂ ಕೊರೋನಾ

error: Content is protected !!
Scroll to Top