Breaking news ಬಂಟ್ವಾಳದಲ್ಲಿ ಮತ್ತೊಂದು ಕೊರೋನ ದೃಢ: 47  ವರ್ಷದ ಮಹಿಳೆಗೆ ತಗುಲಿದ ಸೋಂಕು

ಮಂಗಳೂರು, ಎ.26: ಕೊರೋನ ಸೋಂಕಿನಿಂದ ಮೃತಪಟ್ಟ ಬಂಟ್ವಾಳದ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಆಸ್ಪತ್ರೆಯ 47 ವರ್ಷದ ಸಿಬ್ಬಂದಿ ಮಹಿಳೆಗೆ ಕೊರೋನ ದೃಢಪಟ್ಟಿದೆ. ರಾಜ್ಯದಲ್ಲಿ ಏಕೈಕ ಪ್ರಕರಣ ಇದಾಗಿದೆ.

ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳದ ವೃದ್ಧೆ ಎ.21ರಂದು ಕೊರೋನ ಸೋಂಕಿನಿಂದ ಮೃತಪಟ್ಟಿದ್ದು ವೃದ್ದೆಯ ಸಂಪರ್ಕದಿಂದ ಸ್ವೀಪರ್ ಕೆಲಸ ಮಾಡುತ್ತಿದ್ದ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲದ ಮಹಿಳೆಗೆ ಸೋಂಕು ದೃಢಪಟ್ಟಿದ್ದು ನಾಯಿಲ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ.

ವೃದ್ಧೆ ಮೃತಪಟ್ಟ ತಕ್ಷಣ ಆಸ್ಪತ್ರೆ ಸಿಬ್ಬಂದಿಯನ್ನು ಮಂಗಳೂರಿನಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು ಗಂಟಲ ದ್ರವದ ಮಾದರಿ ವರದಿ ಬಂದ ಬಳಿಕ ಕೊರೋನ ಇರುವುದು ದೃಢಪಟ್ಟಿದೆ.

Also Read   ಕೊಡಿಮಾರು ಅಬೀರ ಉಳ್ಳಾಕುಲು ಮತ್ತು ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಗೊನೆ ಮುಹೂರ್ತ 

ಬಂಟ್ವಾಳ ಕುಟುಂಬದ ಇಬ್ಬರು ಸೇರಿ ಹೊರಗಿನ ಮೂವರಿಗೆ ಸೋಂಕು ತಗುಲಿದ್ದು ಈ ಪೈಕಿ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದು ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಂಟ್ವಾಳ ಪೇಟೆಯಲ್ಲಿ 4, ಸಜೀಪನಡು1, ತುಂಬೆ 1, ಪಾಣೆಮಂಗಳೂರು ಸಮೀಪ 1 ಕೊರೋನ ಪ್ರಕರಣಗಳು ದಾಖಲಾಗಿದೆ.

ಇದೀಗ ದ.ಕ ಜಿಲ್ಲೆಯಲ್ಲಿ 19 ಕೊರೋನ ಪಾಸಿಟಿವ್‌ ಪ್ರಕರಣಗಳು ದಾಖಲಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ. 12 ಮಂದಿ ಗುಣಮುಖರಾಗಿದ್ದು 5 ಮಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 501 ಕ್ಕೆ ಏರಿಕೆಯಾಗಿದ್ದು ಕರ್ನಾಟಕದ ದ.ಕ.ಜಿಲ್ಲೆಯ ಒಬ್ಬರಿಗೆ ಮಾತ್ರ ಇಂದು ಸೋಂಕು ದೃಢಪಟ್ಟಿದೆ.

 

error: Content is protected !!
Scroll to Top