ಕಡಬದಲ್ಲಿ ಮತ್ತೊಂದು ಒಟಿಪಿ ವಂಚನೆ ಬೆಳಕಿಗೆ..!! ➤ ಕ್ಷಣಮಾತ್ರದಲ್ಲಿ 50 ಸಾವಿರ ರೂ. ಗುಳುಂ

(ನ್ಯೂಸ್ ಕಡಬ) newskadaba.com ಕಡಬ, ಎ.24. ಕಡಬದಲ್ಲಿ ಮತ್ತೊಂದು ಒಟಿಪಿ ವಂಚನೆ‌ ನಡೆದಿದ್ದು, ನೆಟ್ಟಣ ನಿವಾಸಿಯೋರ್ವರ ಬ್ಯಾಂಕ್ ಅಕೌಂಟ್ ನಿಂದ ಐವತ್ತು ಸಾವಿರ ರೂ.ಗಳನ್ನು ಎಗರಿಸಲಾಗಿದೆ.

ಕಡಬ ತಾಲೂಕಿನ ಬಿಳಿನೆಲೆ ನಿವಾಸಿ ಧರ್ಮಪಾಲ ಎಂಬವರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಎಪ್ರಿಲ್ 21 ರಂದು ತೆಗೆದಿರುವ ಬಗ್ಗೆ ಮೊಬೈಲ್‌ ಗೆ ಮೆಸೇಜ್‌ ಬಂದಿದ್ದು, ಅದರಂತೆ ಬ್ಯಾಂಕ್ ಗೆ ತೆರಳಿ ವಿಚಾರಿಸಿದಾಗ‌ 20 ಸಾವಿರ ಮತ್ತು 30 ಸಾವಿರ‌ ರೂ. ಗಳನ್ನು ತೆಗೆದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಧರ್ಮಪಾಲ ರವರು ಕಡಬ ಠಾಣೆಗೆ ದೂರು‌ ನೀಡಿದ್ದಾರೆ.

Also Read  ಸಿಡಿ ಪ್ರಕರಣ ➤ ಆರೋಗ್ಯ ಸಮಸ್ಯೆಯ ನೆಪ ಹೇಳಿ ವಿಚಾರಣೆಗೆ ಗೈರಾದ ರಮೇಶ್ ಜಾರಕಿಹೊಳಿ

error: Content is protected !!
Scroll to Top