ಬೆಳ್ಳಂಬೆಳಗ್ಗೆ ಕಡಬದ ಯುವಕನಿಗೆ ಸೈಬರ್ ವಂಚಕನಿಂದ ಕರೆ..! ➤ ಯುವಕನ ಜಾಣತನಕ್ಕೆ ಇಂಗು ತಿಂದ ಮಂಗನಂತಾದ ವಂಚಕ

(ನ್ಯೂಸ್ ಕಡಬ) newskadaba.com ಕಡಬ, ಎ.24. ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 2000 ರೂಪಾಯಿಯನ್ನು ನಿಮ್ಮ ಖಾತೆಗೆ ಜಮಾ‌ ಮಾಡಲಿದ್ದು, ಅದಕ್ಕಾಗಿ ಒಟಿಪಿ ನಂಬರ್ ನೀಡುವಂತೆ ವಂಚಕರ ತಂಡವೊಂದು ಕಡಬದ ಯುವಕನಿಗೆ ಕರೆ ಮಾಡಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಬೆಂಗಳೂರಿನ ಬ್ಯಾಂಕೊಂದರ ಮ್ಯಾನೇಜರ್ ಎಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯು ನಿಮ್ಮ ವಿಜಯಾ ಬ್ಯಾಂಕ್ ಅಕೌಂಟ್ ಗೆ ಪ್ರಧಾನಿ ಮೋದಿಯವರ ವತಿಯಿಂದ ನೀಡಲ್ಪಡುವ 2000 ರೂ. ಗಳನ್ನು ಕಳುಹಿಸಿಕೊಡಲಾಗುತ್ತಿದ್ದು,ಅದಕ್ಕಾಗಿ ಈಗ ಬಂದಿರುವ ಒಟಿಪಿ‌ ಸಂಖ್ಯೆಯನ್ನು ನೀಡುವಂತೆ ತಿಳಿಸಿದ್ದಾನೆ. ಒಟಿಪಿ ನೀಡದೆ ಹಣ ಹಾಕುವುದಾದರೆ ಹಾಕಿ‌, ಇಲ್ಲದಿದ್ದರೆ ಬೇಡ ಎಂದು ಕಡಬದ ವ್ಯಕ್ತಿಯು ಉತ್ತರ ನೀಡಿದ್ದು, ಈ ವೇಳೆ ವಂಚಕ ಅಶ್ಲೀಲ ಪದಗಳನ್ನು ಬಳಸಿ ಕರೆ ಕಡಿತಗೊಳಿಸಿದ್ದಾನೆ. ಕಡಬದ ಯುವಕನ ಜಾಣತನದಿಂದಾಗಿ ಸಾವಿರಾರು ರೂ.‌ ಕಳೆದುಕೊಳ್ಳುವುದು ತಪ್ಪಿದಂತಾಗಿದೆ.

Also Read  ಐವರ್ನಾಡು: ಅಪಾಯಕಾರಿ ಸ್ಥಿತಿಯಲ್ಲಿದ್ದ ಮರಗಳ ತೆರವು

error: Content is protected !!
Scroll to Top