ಪಡೀಲ್‌ನ ‘ಫಸ್ಟ್ ನ್ಯೂರೋ’ ಆಸ್ಪತ್ರೆಯ ಸುತ್ತಲಿನ ಪ್ರದೇಶ ಕಂಟೈನ್ಮೆಂಟ್ ವಲಯ: ಜಿಲ್ಲಾಧಿಕಾರಿ

ಮಂಗಳೂರು, ಎ.23: ಕೊರೋನ ಸೋಂಕಿನಿಂದ ಇತ್ತೀಚೆಗೆ ಮೃತಪಟ್ಟ ಬಂಟ್ವಾಳ ಪೇಟೆಯ ಮಹಿಳೆಯ ಅತ್ತೆ ಚಿಕಿತ್ಸೆ ಪಡೆಯುತ್ತಿದ್ದ ಪಡೀಲ್ ಸಮೀಪದ ಫಸ್ಟ್ ನ್ಯೂರೋ ಖಾಸಗಿ ಆಸ್ಪತ್ರೆಯ ಸೀಮಿತ ಪ್ರದೇಶವನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸುವ ಮೂಲಕ ಎಲ್ಲಾ ಚಟುವಟಿಕೆಗಳಿಗೆ ದ.ಕ. ಜಿಲ್ಲಾಡಳಿತ ಕಟ್ಟುನಿಟ್ಟಿನ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.

ಮೃತ ಮಹಿಳೆಯ ಅತ್ತೆ ಕಳೆದ 1 ತಿಂಗಳಿಂದ ಪಾರ್ಶ್ವವಾಯು ಪೀಡಿತರಾಗಿ ಪಡೀಲ್ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಮೃತ ಮಹಿಳೆಯ ಅತ್ತೆಗೂ ಕೊರೋನ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದವರೆಲ್ಲರೂ ಕೊರೋನ ಶಂಕೆಯ ವ್ಯಾಪ್ತಿಗೆ ಬಂದಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದವರು, ಈ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರು, ನರ್ಸ್‌ಗಳು ಮತ್ತು ಸಿಬ್ಬಂದಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುವ ಜೊತೆಗೆ ಕ್ವಾರಂಟೈನ್ ಮಾಡುವ ಅನಿವಾರ್ಯತೆ ಉಂಟಾಗಿದೆ.

ಈ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಸೋಂಕು ವ್ಯಾಪ್ತಿಸದಂತೆ ವೃದ್ಧೆ ಚಿಕಿತ್ಸೆಗೆ ದಾಖಲಾಗಿದ್ದ ಖಾಸಗಿ ಆಸ್ಪತ್ರೆಯನ್ನು ಸುಪರ್ವೈಸ್ಡ್ ಐಸೋಲೆಟೆಡ್ ಸೆಂಟರ್ ಆಗಿ ಗುರುತಿಸಲಾಗಿದೆ. ಹೀಗಾಗಿ ಸೀಲ್‌ಡೌನ್ ವೇಳೆ ಆಸ್ಪತ್ರೆಯಲ್ಲಿದ್ದ ರೋಗಿ, ಸಿಬ್ಬಂದಿ, ವೈದ್ಯರು, ನರ್ಸ್ ಸೇರಿದಂತೆ ಆಸ್ಪತ್ರೆಯಿಂದ ಹೊರಬರುವಂತಿಲ್ಲ. ಹಾಗೂ ಯಾರು ಕೂಡಾ ಒಳಹೋಗುವಂತಿಲ್ಲ. ಆಸ್ಪತ್ರೆಯಲ್ಲಿ ಸೀಲ್‌ಡೌನ್ ವೇಳೆ ಇದ್ದವರಿಗೆ ಆಹಾರ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಲಿದೆ ಎಂದು ತಿಳಿದುಬಂದಿದೆ.

Also Read  ESI ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲ ► ಮೊಬೈಲ್ ಟಾರ್ಚ್ ಲೈಟ್‍ನಲ್ಲೇ ರೋಗಿಗಳಿಗೆ ಚಿಕಿತ್ಸೆ

ಅಲ್ಲದೆ ಈ ಆಸ್ಪತ್ರೆಗೆ ಹೊಂದಿಕೊಂಡಿರುವ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ದಿಕ್ಕುಗಳಲ್ಲಿ ಸೀಮಿತ ಪ್ರದೇಶವನ್ನು ಕಂಟೈನ್ಮೆಂಟ್ ವಲಯವಾಗಿ ಘೋಷಿಸಲಾಗಿದೆ. ಇದರಿಂದ ಈ ವಲಯದಲ್ಲಿ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಮನೆಯಿಂದ ಯಾರು ಹೊರಗೆ ಹೋಗುವಂತಿಲ್ಲ, ಹಾಗೂ ಹೊರಗಡೆಯಿಂದ ಈ ಪ್ರದೇಶಕ್ಕೆ ಬರುವುದನ್ನು ಸಂಪೂರ್ಣ ತಡೆಹಿಡಿಯುವ ಮೂಲಕ ಕಟ್ಟೆಚ್ಚರ ವಹಿಸಲಾಗಿದೆ.

ಆಸ್ಪತ್ರೆಯ ಪೂರ್ವ ಭಾಗದಿಂದ ಕನ್ನಗುಡ್ಡೆ, ಪಶ್ಚಿಮದಿಂದ ರಮಾನಾಥ್ ಕೃಪಾ ರೈಸ್ ಮಿಲ್, ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿ 73 ಮತ್ತು ದಕ್ಷಿಣಕ್ಕೆ ಸರಕಾರಿ ಜಾಗದ ಸುತ್ತ ಕಂಟೈನ್ಮೆಂಟ್ ಪ್ರದೇಶ ಘೋಷಣೆ ಮಾಡಲಾಗಿದೆ. ಆಸ್ಪತ್ರೆ ಜೊತೆಗೆ ಎರಡು ಮನೆ, ಐದು ಅಂಗಡಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಅಲ್ಲಿಂದ 5 ಕಿಲೋಮೀಟರ್ ಸುತ್ತಾಮುತ್ತ ಬಫರ್ ರೆನ್ ಆಗಿ ಘೋಷಿಸಲಾಗಿದೆ. ಕಲ್ಲಾಪು, ಕುಡುಪು, ಫರಂಗಿಪೇಟೆ, ಫಳ್ನೀರ್ ಪ್ರದೇಶ ಒಳಗೊಳ್ಳಲಿದ್ದು 42 ಸಾವಿರ ಮನೆ, 1800 ಅಂಗಡಿ ಮತ್ತು ಕಚೇರಿ, 1.8 ಲಕ್ಷ ಜನರು ಈ ವ್ಯಾಪ್ತಿಗೆ ಬರಲಿದ್ದಾರೆ.

Also Read  2017 ಇಸವಿಯ ಬದಲು 2012 ಇಸವಿಯ ರಶೀದಿ ನೀಡಿದ ಪೊಲೀಸರು

error: Content is protected !!
Scroll to Top