ಕೊರೋನ ನಿಧಿಗೆ 1.30 ಕೋಟಿ ರೂ. ನೀಡಿದ ತಮಿಳು ನಟ ವಿಜಯ್

ಬೆಂಗಳೂರು, ಎ.22: ಕೊರೋನ ವೈರಸ್ ನಿಯಂತ್ರಿಸಲು ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಒಟ್ಟು 1.30 ಕೋಟಿ ರೂ.ದೇಣಿಗೆ ನೀಡಿದ್ದಾರೆ.

ದಕ್ಷಿಣ ರಾಜ್ಯ ಸೇರಿದಂತೆ ಪ್ರಧಾನಿ ನಿಧಿಗೂ ದೇಣಿಗೆ ನೀಡುವ ಮೂಲಕ ವಿಜಯ್ ಮಾನವೀಯತೆ ಮೆರೆದಿದ್ದಾರೆ. ಕರ್ನಾಟಕ ಮುಖ್ಯಮಂತ್ರಿಯ ಪರಿಹಾರ ನಿಧಿಗೆ 5 ಲಕ್ಷ ರೂ, ಪ್ರಧಾನಿ ನಿಧಿಗೆ 25 ಲಕ್ಷ ರೂ, ತಮಿಳುನಾಡು ಮುಖ್ಯಮಂತ್ರಿಯ ನಿಧಿಗೆ 50 ಲಕ್ಷ ರೂ. ಹಾಗೂ ಕೇರಳ ಸಿಎಂ ನಿಧಿಗೆ 10 ಲಕ್ಷ ರೂ. ಚಿತ್ರ ಕಾರ್ಮಿಕರ ನಿಧಿಗೆ 25 ಲಕ್ಷ ರೂ. ಮತ್ತು ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿ ಮುಖ್ಯಮಂತ್ರಿಗಳ ನಿಧಿಗೆ ತಲಾ 5 ಲಕ್ಷ ರೂ ದೇಣಿಗೆ ನೀಡಿದ್ದಾರೆ. ವಿಜಯ್ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Also Read  ನಾಳೆ (ಆ. 10) ಎಸ್ಸೆಸ್ಸೆಲ್ಸಿ ಫಲಿತಾಂಶ

error: Content is protected !!
Scroll to Top