ರಾಜ್ಯದಲ್ಲಿ ಇಂದು ಮಧ್ಯರಾತ್ರಿಯಿಂದ ಲಾಕ್‌ಡೌನ್ ಸಡಿಲಿಕೆ ➤ ಏನೆಲ್ಲಾ ಇರಲಿದೆ ಎಂಬ ಕುತೂಹಲವೇ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ‌ಎ.22. ಕಳೆದೊಂದು ತಿಂಗಳಿನಿಂದ ಲಾಕ್‌ಡೌನ್ ನಿಂದ ಕಂಗೆಟ್ಟಿದ್ದ ಜನತೆಗೆ ಶುಭ ಸುದ್ದಿಯೊಂದು ಹೊರಬಿದ್ದಿದ್ದು, ರಾಜ್ಯಾದ್ಯಂತ ಇಂದು ಮದ್ಯರಾತ್ರಿಯಿಂದ ಲಾಕ್ ಡೌನ್ ಸಡಿಲಗೊಳಿಸಿ, ರಾಜ್ಯ ಸರಕಾರವು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ವಾಹನ ರಿಪೇರಿ ಗ್ಯಾರೇಜ್, ಡಾಬಾ, ಕೊರಿಯರ್ ಸೇವೆ, ಪ್ಲಂಬರ್, ಎಲೆಕ್ಟ್ರೀಷಿಯನ್, ಬಡಗಿ, ಕೇಬಲ್ ಹಾಗೂ ಡಿಟಿಎಚ್ ಆಪರೇಟರ್, ಅಗತ್ಯ ವಸ್ತುಗಳ ಆನ್ ಲೈನ್ ಡೆಲಿವರಿ, ಆಹಾರ ಸಂಸ್ಕರಣಾ ಘಟಕಕ್ಕೆ ಅನುಮತಿ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ, ಕೃಷಿ ವಲಯ ಮೀನುಗಾರಿಕೆ ವಲಯಗಳಿಗೆ ಸಂಬಂಧಿಸಿದಂತೆ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಕಂಟೇನ್ ಮೆಂಟ್ ಝೋನ್ ನಲ್ಲಿ ಲಾಕ್‌ಡೌನ್ ಯಥಾಸ್ಥಿತಿ ಮುಂದುವರಿಯಲಿದೆ. ಅಂತರ ಜಿಲ್ಲೆಯ ಸಂಚಾರವಾಗಲೀ, ವಾಹನಗಳ ಓಡಾಟಕ್ಕೆ ಅನುಮತಿ ನೀಡಿಲ್ಲ.

Also Read  ಫೇಸ್ ಬುಕ್ ನಲ್ಲಿ ಪರಿಚಯ; 8 ತಿಂಗಳಿಗೆ ಕೊಲೆಯಾದ ಯುವತಿ ➤ ಪ್ರಿಯಕರ ನಾಪತ್ತೆ !

error: Content is protected !!
Scroll to Top