ಆಲಂಕಾರು ವಿಶೇಷ ಗ್ರಾಮ ಸಭೆ ► ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಆಕ್ರೋಶ

(ನ್ಯೂಸ್ ಕಡಬ) newskadaba.com ಕಡಬ, ಆ.31. ಒಂದೆಡೆ ಅಬಕಾರಿ ಅಧಿಕಾರಿಗಳು ಕಾನೂನಿನ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದರೆ ಇನ್ನೊಂದೆಡೆ ಮದ್ಯದಂಗಡಿ ಮುಚ್ಚಿಸುವಂತೆ ಏರು ಧ್ವನಿಯಲ್ಲಿ ಆಗ್ರಹಿಸಿದ ನಾಗರೀಕರು ಈ ಮದ್ಯೆ ಜಿಲ್ಲಾಧಿಕಾರಿಗೆ ಗ್ರಾಮಸ್ಥರಿಂದ ಎಚ್ಚರಿಕೆಯ ನಿರ್ಣಯ ಅಂಗಿಕಾರ ವಾಗ್ವದ, ಆಣೆಪ್ರಮಾಣದ ಸನ್ನಿವೇಶ ಆಲಂಕಾರು ಗ್ರಾಮ ಪಂಚಾಯಿತಿಯಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಬುಧವಾರ ವ್ಯಕ್ತವಾಯಿತು.


ಸಭೆಯು ಆಲಂಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದ ಬಾರ್ಕುಳಿ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಆಲಂಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಕಾರು ಪೇಟೆಯಲ್ಲಿ ಗ್ರಾಮಸ್ಥರ ಆಕ್ಷೇಪಗಳ ನಡುವೆ ತೆರಯಲ್ಪಟ್ಟ ಮದ್ಯದಂಗಡಿ ವಿಚಾರದಲ್ಲಿ ಈ ಹಿಂದೆ ಆಲಂಕಾರು ಪಂಚಾಯಿತಿ ಎದುರು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ ಬಳಿಕ ತೆಗೆದುಕೊಂಡ ನಿರ್ಧಾರದಂತೆ ಪಂಚಾಯಿತಿ ಅಬಕಾರಿ ಇಲಾಖೆಯು ಗ್ರಾಮಸ್ಥರಿಗೆ ಮಾಹಿತಿ ನೀಡುವ ಸಲುವಾಗಿ ವಿಶೇಷ ಗ್ರಾಮ ಸಭೆ ಅಯೋಜಿಸಿತ್ತು.


ಸಭೆಯು ನಿಗದಿತ ಸಮಯಕ್ಕೆ ತಡವಾಗಿ ಆರಂಭವಾಗಿದ್ದಕ್ಕೆ ಪ್ರಾರಂಭದಲ್ಲಿ ಗ್ರಾಮಸ್ಥರಿಂದ ಅಕ್ಷೇಪ ವ್ಯಕ್ತವಾಯಿತು. ಬಳಿಕ ಅಧಿಕಾರಿಗಳು ಮದ್ಯದಂಗಡಿ ವಿಚಾರದಲ್ಲಿ ಕಾನೂನಿನ ಬಗ್ಗೆ ತಿಳಿಸುತ್ತಿದ್ದಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಸುಪ್ರಿಂಕೋರ್ಟು ಆದೇಶದಿಂದ ಆಲಂಕಾರಿನಲ್ಲಿದ್ದ ಮದ್ಯದಂಗಡಿ ತೆರವಾಗಿತ್ತು. ಮತ್ತೆ ಈ ಭಾಗದಲ್ಲಿ ತೆರೆಯಬಾರದೆಂದು ಈ ಭಾಗದ ಕೆಲವು ಸಂಘಟನೆಗಳು ಆಲಂಕಾರು ಪಂಚಾಯಿತಿಗೆ ಮನವಿ ನೀಡಿತ್ತು. ಆದರೂ ಆಲಂಕಾರು ಪೇಟೆಯ ಸಮೀಪದಲ್ಲಿ ಮದ್ಯಂದಗಡಿ ಅ.11 ರಿಂದ ಕಾರ್ಯಚರಿಸುತ್ತಿದೆ. ಸ್ಥಳಿಯಾಡಳಿತದ ಪರವಾಣಿಗೆಯಿಲ್ಲದೆ ವ್ಯಾಪರ ನಡೆಸುತ್ತಿದೆ. ಮದ್ಯದಂಗಡಿ ತಕ್ಷಣದಿಂದ ಮುಚ್ಚಬೇಕು ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅಬಕಾರಿ ಅಧಿಕಾರಿಗಳಾದ ಸುಜಾತ, ಸುಬ್ರಹ್ಮಣ್ಯ ರಾವ್ , ಈ ಭಾಗದ ಅಕ್ಷೇಪಣೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಪರಿಶೀಲಿಸಿ ಕಾನೂನಿನ ಪ್ರಕಾರ ಅನುಮತಿ ನೀಡಿದ್ದಾರೆ. ಅಬಕಾರಿ ಇಲಾಖೆಗೆ ಮದ್ಯದಂಗಡಿ ತೆರೆಯಲು ಅನುಮತಿ ನೀಡಲು ಸೂಚಿಸಿದ್ದಾರೆ. ಅದರನ್ವಯ ಕಾನೂನು ಪಾಲನೆ ಮಾಡಿದ್ದೇವೆ ಆದರೆ ಮುಚ್ಚುವ ಅಧಿಕಾರ ನಮಗಿಲ್ಲ. ಅದು ಡಿಸಿಗೆ ಮಾತ್ರ . ಈ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದಾಗ ಆಕ್ರೋಶಗೊಂಡ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು. ಈ ಮದ್ಯೆ ಅಧಿಕಾರಿಗಳು ಮಾತನಾಡಿ, ಕಾನೂನಿನಲ್ಲಿ ತಿದ್ದುಪಡಿ ತರುವುದು ಸರಕಾರ, ಜನಪ್ರತಿನಿಧಿಗಳು ಈ ಮುತುವರ್ಜಿವಹಿಸಬೇಕು ಎಂದು ಅಧಿಕಾರಿಗಳು ಮೊದಲಾದ ಸಮಾಜಾಶಿಕೆಗೆ ಒಪ್ಪದ ಗ್ರಾಮಸ್ಥರು ಸಭೆಯುದ್ದಕ್ಕೂ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು. ಅಂತಿಮವಾಗಿ ಗ್ರಾಮಸ್ಥರೇ ಒಮ್ಮತದ ನಿರ್ಧಾರಕ್ಕೆ ಬಂದು, 15 ದಿವಸದೊಳಗೆ ವಿಶೇಷ ಗ್ರಾಮ ಸಭೆಯ ಅಯೋಜಿಸಬೇಕು ಸಭೆಗೆ ಜಿಲ್ಲಾಧಿಕಾರಿಗಳು ಆಗಮಿಸಿ ಮಾಹಿತಿ ನೀಡಿ ಕ್ರಮಕೈಗೊಳ್ಳಬೇಕು ಇಲ್ಲಾವದಲ್ಲಿ ಗ್ರಾಮಸ್ಥರೇ ಮುಂದಾಗಿ ಮದ್ಯದಂಗಡಿ ಮುಚ್ಚುಸುತ್ತೇವೆ ಎಂದು ಎಚ್ಚರಿಕೆ ನೀಡಿದಂತೆ ನಿರ್ಣಯ ಅಂಗಿಕರಿಸಲಾಯಿತು.

Also Read  ಕಡಬ: ಸೆ.21ರಂದು ಗುರುವಂದನಾ ಕಾರ್ಯಕ್ರಮ

ಆಕ್ಷೇಪಗಳ ನಡುವೆ ಮದ್ಯದಂಗಡಿಗೆ ಪರವಾಣಿಗೆ ನೀಡಿದ್ದೀರಿ. ಈ ಭಾಗದ ತಾಯಂದಿರ ಶಾಪಕ್ಕೆ ಇಲಾಖೆಯ ನೀವೆಲ್ಲ ಗುರಿಯಾಗುತ್ತೀರಿ. ಮದ್ಯದ ಬಾಟಲಿಯಲ್ಲಿ ಅರೋಗ್ಯಕ್ಕೆ ಹಾನೀಕಾರ ಎಂದು ಬರೆದು ನೀವು ಮಾರಟ ಮಾಡಿ ಜೀವಕ್ಕೆ ಹಾನಿ ಮಾಡುತ್ತಿದ್ದೀರಿ ಇದು ಇಲಾಖೆ ದಯಾಮರಣ ನೀಡಿದಂತೆ ಅಲ್ಲವೇ ಎಂದು ಪ್ರಶ್ನಿಸಿದ ಗ್ರಾಮಸ್ಥ ಜನಾರ್ದನ ಗೌಡ ಕ್ಯಯಪೆ ಅಬಕಾರಿ ಇಲಾಖೆ ಎಂದು ನಾಮಕರಣದ ಬದಲಾಗಿ ದಯಾಮರಣ ಇಲಾಖೆ ಎಂದು ಬದಲಾವಣೆ ಮಾಡಿಕೊಳ್ಳಿ ಎಂದು ಲೇವಡಿ ಮಾಡಿದರು. ಇದಕ್ಕೆ ಸಭೆಯಲ್ಲಿದ್ದವರು ಧ್ವನಿಗೂಡಿಸಿದರು.

ಮದ್ಯದಂಗಡಿ ತೆರೆಯುವುದಕ್ಕೆ ಸ್ಥಳಿಯಾಡಳಿತದ ಜನಪ್ರತಿನಿಧಿಗಳು ಬಾರ್ ಮಾಲೀಕರಿಂದ ಲಂಚ ಪಡೆದಿದ್ದಾರೆ ಎಂದು ಗ್ರಾಮಸ್ಥ ಕೃಷ್ಣಪ್ಪ ಹೇಳಿಕೆ ವೇದಿಕೆಯಲ್ಲಿದ್ದ ಜನಪ್ರತಿನಿಧಿಗಳು ಆಕ್ರೋಶಕ್ಕೆ ಕಾರಣವಾಯಿತು. ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಪುಜಾರಿ ಮಾತನಾಡಿ, ಮದ್ಯದಂಗಡಿ ತೆರೆದಿರುವುದಕ್ಕೆ ಗ್ರಾಮಸ್ಥರ ಆಕ್ಷೇಪಕ್ಕೆ ಬೆಂಬಲವಾಗಿ ನಿಂತಿದೆ ಮದ್ಯದಂಗಡಿಯಲ್ಲದೆ ಗ್ರಾಮದ ಅಭಿವೃದ್ದಿಯ ವಿಚಾರದಲ್ಲಿ ಯಾರೊಬ್ಬರಿಂದಲೂ ಲಂಚ ಪಡೆಯುವ ಕೀಳು ಮಟ್ಟಕ್ಕೆ ಇಳಿದಿಲ್ಲ. ಕಾನೂನಿನಡಿ ಕೆಲಸ ನಿರ್ವಹಿಸಿದಾಗ ಆಕ್ಷೇಪಿವವರು ಇದ್ದಾರೆ. ಲಂಚ ಪಡೆದಿದ್ದಾರೆ ಎಂದು ಹೇಳಿದವರು ಸಾಭೀತುಮಾಡಲಿ ಎಂದಾಗ ನನ್ನಲ್ಲಿ ಸಾರ್ವಜನಿಕರು ಹೇಳುತ್ತಿದ್ದಾರೆ ಎಂದಾಗ ಮತ್ತೆ ಮಾತನಾಡಿದ ಸುಧಾಕರ ಪುಜಾರಿ ಕಾರ್ಣಿಕ ಸ್ಥಳದಲ್ಲಿ ಅಣೆಪ್ರಮಾಣ ನಾವೆಲ್ಲ ಸಿದ್ದ ಲಂಚ ಪಡೆದಿದ್ದಾರೆ ಎಂದು ಹೇಳುವವರನ್ನು ತಮ್ಮದೆ ಖರ್ಚಿನಲ್ಲಿ ಅಣೆಪ್ರಮಾಣಕ್ಕೆ ಕರೆದುಕೊಂಡು ಹೋಗುತ್ತೇವೆ ಎಂದಾಗ ಕೃಷ್ಣಪ್ಪ ಮೌನಕ್ಕೆ ಜಾರಿದರು.

Also Read  ದೀಪಾವಳಿ ಹಬ್ಬದ ಪ್ರಯುಕ್ತ ಮಂಗಳೂರು-ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ

ಸರಕಾರ ಕಾನೂನಿನಲ್ಲಿ ತಿದ್ದುಪಡಿ ತರುವ ಮೂಲಕ ಸಮಾಜಿಕ ಬದ್ದತೆಗೆ ದಕ್ಕೆ ತರುತ್ತಿದೆ. ಸರಕಾರ ದಿಟ್ಟ ನಿರ್ಧಾರ ಕೈಗೊಂಡಲ್ಲಿ ಅಬಕಾರಿ ಇಲಾಖೆಯಲ್ಲಿನ ಕಾನೂನಿನಲ್ಲಿ ಬದಲಾವಣೆ ಸಾಧ್ಯ. ಜನಪ್ರತಿನಿಧಿಗಳು ವೋಟ್ ಬ್ಯಾಂಕ್ ರಾಜಕಾರಣದಿಂದ ಸಮಾಜದ ಅಭಿವೃದ್ದಿಯ ಇಚ್ಚಾಶಕ್ತಿ ಕಡಿಮೆಯಾಗಿದೆ. ಮದ್ಯದಂಗಡಿ ಮುಚ್ಚಿಸುವ ನಮ್ಮ ಹೋರಾಟದಲ್ಲಿ ಸ್ಥಳಿಯಾಡಳಿತ ಭಾಗಿಯಾಗಬೇಕು ಇಲ್ಲವಾದಲ್ಲಿ ನೈತಿಕ ಹೊಣೆಯೊತ್ತು ಪಂಚಾಯಿತಿಯ ಎಲ್ಲಾ ಸದಸ್ಯರು ರಾಜೀನಾಮೆ ನೀಡುಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಶಿವಣ್ಣ ಗೌಡ ಕಕ್ವೆ, ದಯಾನಂದ ಗೌಡ ಬಡ್ಡಮೆ, ರಮನಾಥ ರೈ, ಶೀನಪ್ಪ ಕುಂಬಾರ, ವಾರಿಜ ಕುಕ್ಕೇರಿ, ತುಳಸಿ ಕೊಂಡಾಡಿ, ಸುಶೀಲ ಕುಕ್ಕೇರಿ, ಹರೀಶ ಏಣಿತಡ್ಕ, ಗಣೇಶ್ ಕುಕ್ಕೇರಿ, ಅಬುಬಕ್ಕರ್ ನೆಕ್ಕರೆ, ಸುಂದರ ಎ.ಬಿ ಮೊದಲಾದವರು ಸಭೆಯಲ್ಲಿ ಚರ್ಚಿಸಿದರು.


ತಾಲೂಕು ಪಂಚಾಯಿತಿ ಸದಸ್ಯೆ ತಾರಾ ಕೇಪುಳು, ಗ್ರಾಮ ಪಂಚಾಯಿತಿ ಸದಸ್ಯರಾದ ಕೇಶವ ಗೌಡ ಆಲಡ್ಕ, ಇಂಧುಶೇಖರ ಶೆಟ್ಟಿ, ಕೊರಗಪ್ಪ, ಸದಾನಂದ ಆಚಾರ್ಯ, ಪುಷ್ಪಾ, ರೇವತಿ, ನಾಗವೇಣಿ, ಭವಾನಿ, ಸುನಂದ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಜಗನ್ನಾಥ ರೈ ಸ್ವಾಗತಿಸಿ ವಂದಿಸಿದರು.

Also Read  ➤ ಭಾರತಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಭೇಟಿ

error: Content is protected !!
Scroll to Top