ರಸ್ತೆ ಅಪಘಾತ: ಖಾಸಗಿ ಚಾನೆಲ್‌ನ ವರದಿಗಾರ ಮೃತ್ಯು

ರಾಮನಗರ, ಎ.21: ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಖಾಸಗಿ ಚಾನೆಲ್ ಒಂದರ ರಾಮನಗರದ ಜಿಲ್ಲೆಯ ವರದಿಗಾರ ಸಾವನ್ನಪ್ಪಿರುವ ಘಟನೆ ರಾಮನಗರದ ಕಾರಾಗೃಹದಲ್ಲಿ ನಡೆದಿದೆ.

ಮೃತರನ್ನು ಪಬ್ಲಿಕ್ ಟಿವಿ ರಾಮನಗರದ ವರದಿಗಾರ ಹನುಮಂತು ಎಂದು ಗುರುತಿಸಲಾಗಿದೆ.

ಇವರು ಪಾದರಾಯನಪುರ ಗಲಭೆಯ ಆರೋಪಿಗಳನ್ನ ರಾಮನಗರದ ಕಾರಾಗೃಹಕ್ಕೆ ಕರೆತಂದಿದ್ದ ವರದಿಯನ್ನು ಮಾಡಿ ಹಿಂದಿರುಗುತ್ತಿದ್ದಾಗ ರಾಮನಗರದ ಕಾರಾಗೃಹದ ಬಳಿ ಈ ಘಟನೆ ನಡೆದಿದೆ.

ಹನುಮಂತು ಅವರು ಕಳೆದ 6 ವರ್ಷಗಳಿಂದಲೂ ರಾಮನಗರ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಮೂರು ವರ್ಷಗಳ ಹಿಂದಷ್ಟೆ ವಿವಾಹವಾಗಿದ್ದರು. ಮೃತರು ಪತ್ನಿ ಒಂದು ವರ್ಷದ ಒಂದು ಮಗುವನ್ನು ಅಗಲಿದ್ದಾರೆ.

Also Read  ಪುತ್ತೂರು: ಭಜನಾಮಂದಿರ ವಿಚಾರವಾಗಿ ಇತ್ತಂಡದ ನಡುವೆ ಹೊಡೆದಾಟ..! ➤ ಮಹಿಳೆ ಗಂಭೀರ

ಹನುಮಂತು ಅವರ ನಿಧನಕ್ಕೆ ರಾಮನಗರ ಜಿಲ್ಲಾ ಪತ್ರಕರ್ತ ಸಹೋದ್ಯೋಗಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!
Scroll to Top