ಪೊಲೀಸರನ್ನು ಕಂಡು ಸ್ಕೂಟಿಯಲ್ಲಿ ಪರಾರಿಯಾದ ಬಾಲಕ ➤ ಬೆನ್ನಟ್ಟಿ ಹಿಡಿದ ಕಡಬ ಪೊಲೀಸರು ಮಾಡಿದ್ದೇನು..?

(ನ್ಯೂಸ್ ಕಡಬ) newskadaba.com ಕಡಬ, ಎ.20. ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಸ್ಕೂಟರ್ ನಿಲ್ಲಿಸದೆ ಪರಾರಿಯಾದ ಬಾಲಕನನ್ನು ಜೀಪ್ ನಲ್ಲಿ ಬೆನ್ನಟ್ಟಿ ಹಿಡಿದ ಪೊಲೀಸರು ದಂಡ ವಿಧಿಸಿದ್ದಾರೆ.

 

ಸುಂಕದಕಟ್ಟೆಯ ಬಾಲಕ‌ನೋರ್ವ ಸ್ಕೂಟರ್ ನಲ್ಲಿ ಕಡಬಕ್ಕೆ ಆಗಮಿಸಿದ್ದು, ಪೊಲೀಸರನ್ನು ಕಂಡೊಡನೆ ಮಹಾಗಣಪತಿ ದೇವಸ್ಥಾನ ರಸ್ತೆಯ ಮೂಲಕ ಪರಾರಿಯಾಗಿದ್ದಾನೆ. ತಕ್ಷಣವೇ ಕಡಬ ಪೊಲೀಸರು ಬಾಲಕನನ್ನು ಬೆನ್ನಟ್ಟಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪೊಲೀಸ್ ಜೀಪ್ ಚರಂಡಿಗಿಳಿದಿದೆ. ಇದನ್ನು ಕಂಡ ಬಾಲಕ ಸ್ಕೂಟರನ್ನು ಅಲ್ಲೇ ಬಿಟ್ಟು ಕೀ ತೆಗೆದುಕೊಂಡು ಪರಾರಿಯಾಗಿದ್ದಾನೆ. ಈ ವೇಳೆ ಸ್ಥಳೀಯರ ಸಹಕಾರದಿಂದ ಬಾಲಕನನ್ನು ಬಂಧಿಸಿ ದಂಡ ವಿಧಿಸಿ ಬಿಡಲಾಯಿತು. ವಾರದ ಹಿಂದೆ ಇದೇ ಬಾಲಕನಿಗೆ ಕಡಬ ಪೊಲೀಸರು ದಂಢ ವಿಧಿಸಿ ಕಳುಹಿಸಿದ್ದರು. ಆದರೂ ಇಂದು ಪುನಃ ಪೇಟೆಗೆ ಆಗಮಿಸಿದ್ದು, ಪೊಲೀಸರನ್ನು ಆಕ್ರೋಶಗೊಳ್ಳುವಂತೆ ಮಾಡಿದೆ.

Also Read  ಸ್ಯಾಂಡಲ್ ವುಡ್ ನಿರ್ದೇಶಕ ಕಿರಣ್ ಗೋವಿ ವಿಧಿವಶ

error: Content is protected !!
Scroll to Top