ಕಡಬದ ‘ಯಶೋದಾ’ದಲ್ಲಿ ಕೊರೋ‌ನಾ.!! ➤ ‘ಯಶೋದಾ’ ಮಾಲಕರಿಂದ ಸ್ಪಷ್ಟೀಕರಣ

(ನ್ಯೂಸ್ ಕಡಬ) newskadaba.com ಕಡಬ, ಎ.20. ಇಲ್ಲಿನ ಯಶೋದಾ ಜನರಲ್ ಸ್ಟೋರ್ ನಲ್ಲಿ ಕೊರೋನಾ ಶಂಕಿತ ವ್ಯಕ್ತಿ ಇದ್ದಾನೆಂಬ ಸುದ್ದಿ ಕ್ಷಣಮಾತ್ರದಲ್ಲಿ ವಾಟ್ಸ್ಅಪ್ ಮೂಲಕ ಹರಿದಾಡಿದ್ದು, ಈ ಬಗ್ಗೆ ಯಶೋದಾ ಸ್ಟೋರ್ ನ ಮಾಲಕರು ಸ್ಪಷ್ಟನೆ ನೀಡಿದ್ದಾರೆ.

ಕೊರೋನಾ ದೃಢಪಟ್ಟಿರುವ ಉಪ್ಪಿನಂಗಡಿಯ ವಕೀಲರ ಸಹಾಯಕ ವಕೀಲನ ಸಹೋದರ ನಮ್ಮ‌ ಸಂಸ್ಥೆಯಲ್ಲಿ ಕೆಲಸದಲ್ಲಿದ್ದು, ಕಳೆದ ಹದಿನೈದು ದಿನಗಳಿಂದ ಆತನನ್ನು ರಜೆಯಲ್ಲಿದ್ದಾನೆ. ಕೊರೋನಾ ಸೋಂಕಿತ ವಕೀಲ ಹಾಗೂ ಸಹಾಯಕ ವಕೀಲನ ನಡುವೆ ಕಳೆದ ಒಂದೂವರೆ ತಿಂಗಳಿನಿಂದ ಸಂಪರ್ಕ ಇಲ್ಲವೆನ್ನುವುದನ್ನು ಸ್ಥಳೀಯಾಡಳಿತವು ಈಗಾಗಲೇ ಸ್ಪಷ್ಟಪಡಿಸಿದೆ. ನಮ್ಮಲ್ಲಿ ಶಂಕಿತರು ಯಾರೂ ಕೆಲಸ ನಿರ್ವಹಿಸುತ್ತಿಲ್ಲ. ಈಗ ಯಾರೋ ಕಿಡಿಗೇಡಿಗಳು ನಮ್ಮ ಸಂಸ್ಥೆಯ ಹೆಸರಿಗೆ ಹುಳಿ‌ ಹಿಂಡುವ ಕೆಲಸ ಮಾಡುತ್ತಿದ್ದು, ಸುಳ್ಳು ಸುದ್ದಿ ಹರಡುವ ಅಂತಹವರ ವಿರುದ್ಧ ಪೊಲೀಸ್ ದೂರು ನೀಡಲಾಗುವುದು ಎಂದು ಮಾಲಕರಾದ ದಯಾನಂದ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ವಾಮದಪದವು: "ಬಲೆ ತುಳು ಲಿಪಿ ಕಲ್ಪುಗ" ಕಾರ್ಯಾಗಾರ ಉದ್ಘಾಟನೆ

error: Content is protected !!
Scroll to Top